ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಭಾರತ

ದಾರಾಶಿವದ ಯೆಡ್ಶಿಯಲ್ಲಿ ಅಗ್ನಿ ಅವಘಡ: ಒಂದೇ ಕುಟುಂಬದ ಆರು ಮಂದಿ ಸಜೀವ ದಹನ

ದಾರಾಶಿವ: ಮಹಾರಾಷ್ಟ್ರದ ದಾರಾಶಿವ ಜಿಲ್ಲೆಯ ಯೆಡ್ಶಿಯಲ್ಲಿ ದೀಪಾವಳಿ ಸಂಭ್ರಮ ಘೋರ ದುರಂತದಲ್ಲಿ ಅಂತ್ಯವಾದ ಘಟನೆ ನಡೆದಿದ್ದು, ಹಬ್ಬದ ವೇಳೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಆರು ಮಂದಿ ಸಜೀವ ದಹನವಾಗಿದ್ದಾರೆ. ಒಬ್ಬ ವ್ಯಕ...

ದೀಪಾವಳಿ ಸಂಭ್ರಮ ಘೋರ ದುರಂತದಲ್ಲಿ ಅಂತ್ಯ; ಹಬ್ಬದ ವೇಳೆ ಮನೆಯಲ್ಲಿ ಅಗ್ನಿ ಅವಘಡ: ಒಂದೇ ಕುಟುಂಬದ ಆರು ಮಂದಿ ಸಾವು!
ಹಂಚಿಕೊಳ್ಳಿ:

ಮಹಾರಾಷ್ಟ್ರದ ದಾರಾಶಿವ ಜಿಲ್ಲೆಯ ಯೆಡ್ಶಿಯಲ್ಲಿ ನಡೆದ ಅಗ್ನಿ ಅವಘಡದಲ್ಲಿ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿದ್ದಾರೆ. ಉತ್ತಮ್ ತ್ರಿಂಬಕ್, ಚಂದ್ರಕಲಾ, ಗೋವಿಂದ್, ಜ್ಯೋತಿ, ಗಾಯತ್ರಿ ಮತ್ತು ಸಿದ್ಧಿ ಮೃತಪಟ್ಟವರು. ಇವರು ದಿನಸಿ ಅಂಗಡಿಯ ಮೇಲಿನ ಮಹಡಿಯಲ್ಲಿ ವಾಸಿಸುತ್ತಿದ್ದರು. ಹಬ್ಬದ ಪೂಜೆಯ ನಂತರ ಮಲಗಿದ್ದಾಗ ಮಧ್ಯರಾತ್ರಿ ಈ ದುರ್ಘಟನೆ ಸಂಭವಿಸಿದೆ. ಅಗ್ನಿಶಾಮಕ ದಳ ಮತ್ತು ಗ್ರಾಮಸ್ಥರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಕುಟುಂಬದವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಒಬ್ಬ ವ್ಯಕ್ತಿ ಮಾತ್ರ ಸುರಕ್ಷಿತವಾಗಿ ಹೊರಬಂದಿದ್ದಾರೆ ಎಂದು ವರದಿಯಾಗಿದೆ. ಶಾರ್ಟ್ ಸರ್ಕ್ಯೂಟ್ ಅಥವಾ ದೀಪದಿಂದ ಬೆಂಕಿ ಹತ್ತಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಹಂಚಿಕೊಳ್ಳಿ: