ಬುಲ್ಧಾನಾ: ರೈತರ ಅಂತ್ಯಕ್ರಿಯೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಸಂಜಯ್ ಗಾಯಕ್ವಾಡ್
ಬುಲ್ಧಾನಾ (ಮಹಾರಾಷ್ಟ್ರ): ಸಾಲದ ಸುಳಿ, ಬೆಳೆ ನಷ್ಟ, ಬೆಲೆ ಕುಸಿತ, ನೀರಾವರಿ ಕೊರತೆಯಂತಹ ಸಮಸ್ಯೆಗಳಿಂದ ತೀವ್ರ ಹತಾಶೆಗೊಳ್ಳುವ ರೈತರು, ಬೇರೆ ದಾರಿ ಕಾಣದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ, ರೈತರ ಆತ್ಮಹತ್ಯೆ ಬಗ...

ಮಹಾರಾಷ್ಟ್ರದ ಬುಲ್ಧಾನಾ ಕ್ಷೇತ್ರದ ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್ ಅವರು ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಅಂತ್ಯಕ್ರಿಯೆಯಲ್ಲಿ ಯಾರೂ ಪಾಲ್ಗೊಳ್ಳಬಾರದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರೈತರು ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳುವುದನ್ನು ತಡೆಯಲು ಶವಗಳನ್ನು ಪ್ರಾಣಿಗಳಿಗೆ ಬಿಡಬೇಕು ಎಂಬರ್ಥದಲ್ಲಿ ಅವರು ಮಾತನಾಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹೇಳಿಕೆಯನ್ನು ರೈತ ಮುಖಂಡ ರವಿಕಾಂತ್ ತುಪ್ಕರ್ ತೀವ್ರವಾಗಿ ಖಂಡಿಸಿದ್ದು, ರೈತರು ಆರ್ಥಿಕ ಸಂಕಷ್ಟದಿಂದ ಈ ನಿರ್ಧಾರ ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ. ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಈ ಕೂಡಲೇ ಕ್ಷಮೆಯಾಚಿಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿವೆ.




