ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಭಾರತ

ಅಯೋಧ್ಯೆಯಲ್ಲಿ ತಂಗಿಯ ಟೀ ಅಂಗಡಿ ವಿಚಾರಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಪ್ರತಿಕ್ರಿಯೆ

ಅಯೋಧ್ಯೆ: ತಮ್ಮ ತಂಗಿ ಟೀ ಅಂಗಡಿ ನಡೆಸುತ್ತಿರುವ ಕುರಿತು ಎದ್ದಿರುವ ಚರ್ಚೆಗೆ ತೆರೆ ಎಳೆದಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅದರಲ್ಲಿ ತಪ್ಪೇನು..? ಆಕೆ ತನ್ನ ಕಾಲ ಮೇಲೆ ನಿಂತಿದ್ದಾಳೆ ಎಂದು ಹೇಳಿ...

'ಟೀ ಮಾರಿದ್ರೇನು..? ಯಾರ ಬಳಿಯೂ ಕೈ ಚಾಚ್ತಿಲ್ಲ.. ತನ್ನ ಕಾಲ ಮೇಲೆ ನಿಂತಿದ್ದಾಳೆ': ತಂಗಿ ಬೆನ್ನಿಗೆ ನಿಂತ ಸಿಎಂ ಯೋಗಿ ಆದಿತ್ಯಾನಾಥ್
ಹಂಚಿಕೊಳ್ಳಿ:

ಅಯೋಧ್ಯೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ತಂಗಿಯ ಕುರಿತಾದ ಟೀ ಅಂಗಡಿ ವಿಡಿಯೋ ಬಗ್ಗೆ ಮಾತನಾಡಿದ್ದಾರೆ. ತಮ್ಮ ತಂಗಿ ಯಾರ ಮುಂದೆಯೂ ಕೈಚಾಚದೆ ಸ್ವಂತ ದುಡಿಮೆಯಿಂದ ಬದುಕು ನಡೆಸುತ್ತಿರುವುದು ಗೌರವದ ಸಂಗತಿ ಎಂದು ಅವರು ತಿಳಿಸಿದ್ದಾರೆ. ತಾನು ಯೋಗಿಯಾಗಿದ್ದು ರಾಜ್ಯದ 25 ಕೋಟಿ ಜನರೇ ನನ್ನ ಕುಟುಂಬ ಎಂದು ಹೇಳಿದ ಅವರು, ಸ್ವಾವಲಂಬನೆಯ ಜೀವನವೇ ಶ್ರೇಷ್ಠ ಎಂದು ಅಭಿಪ್ರಾಯಪಟ್ಟಿದ್ದಾರೆ. ಕುಟುಂಬದ ಸದಸ್ಯರು ಸ್ವಂತ ಕಾಲ ಮೇಲೆ ನಿಂತು ಬದುಕು ಕಟ್ಟಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಹಂಚಿಕೊಳ್ಳಿ: