ಅಯೋಧ್ಯೆಗೆ ಬರುವ ಮುನ್ನ ರಾಮ ಭಕ್ತರಲ್ಲಿ ಕ್ಷಮೆ ಕೇಳಿ: ಅಖಿಲೇಶ್ ಯಾದವ್‌ಗೆ ಯೋಗಿ ಆದಿತ್ಯನಾಥ್ ಸೂಚನೆ
ಅಯೋಧ್ಯೆ: ರಾಮ ಭಕ್ತರ ಮೇಲೆ ಗುಂಡು ಹಾರಿಸಿದವರು, ಸಾಧು-ಸಂತರಿಗೆ ಲಾಠಿ ಏಟು ನೀಡಿದವರು ಮತ್ತು ಅಯೋಧ್ಯೆಯನ್ನು ಕಡೆಗಣಿಸಿದವರು, ರಾಮ ಭಕ್ತರು ಹಾಗೂ ಸಾಧು-ಸಂತರಲ್ಲಿ ಕ್ಷಮೆ ಕೇಳಿದ ನಂತರವಷ್ಟೇ ರಾಮ ಮಂದಿರಕ್ಕೆ ಭೇಟಿ ನೀಡ...

ಅಯೋಧ್ಯೆಯಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹಿಂದಿನ ಸರ್ಕಾರಗಳ ಆಡಳಿತಾವಧಿಯಲ್ಲಿ ರಾಮ ಭಕ್ತರು ಹಾಗೂ ಸಾಧು-ಸಂತರ ಮೇಲೆ ನಡೆದ ದೌರ್ಜನ್ಯಗಳನ್ನು ನೆನಪಿಸಿದರು. ರಾಮ ಮಂದಿರ ಚಳುವಳಿಯ ಸಂದರ್ಭದಲ್ಲಿ ಕರ ಸೇವಕರ ಮೇಲೆ ಗುಂಡು ಹಾರಿಸಿದ ಮತ್ತು ಅಯೋಧ್ಯೆಯನ್ನು ನಿರ್ಲಕ್ಷಿಸಿದವರು, ಭೇಟಿ ನೀಡುವ ಮುನ್ನ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ಡಿಸೆಂಬರ್ 12 ರಂದು ಅಖಿಲೇಶ್ ಯಾದವ್ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ಎಂಬ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದಿದೆ. ಧಾರ್ಮಿಕ ಕಾರ್ಯಕ್ರಮಗಳ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳುವ ಅರಿವು ಕೆಲವು ನಾಯಕರಿಗೆ ಇಲ್ಲ ಎಂದು ಅವರು ಪರೋಕ್ಷವಾಗಿ ಟೀಕಿಸಿದರು.




