ಆಂಧ್ರಪ್ರದೇಶದಲ್ಲಿ ಅರ್ನಬ್ ಚಂಡಮಾರುತ ಅಬ್ಬರ: ಮಳೆ ಸಂಬಂಧಿ ಅವಘಡಗಳಲ್ಲಿ ಮೂವರು ಬಲಿ
ಅಮರಾವತಿ: ಇಂದು (ಬುಧವಾರ) ಬೆಳಿಗ್ಗೆ ಆಂಧ್ರಪ್ರದೇಶದ ಕರಾವಳಿಗೆ ‘ಅರ್ನಬ್’ ಚಂಡಮಾರುತ ಅಪ್ಪಳಿಸಿದೆ. ಇದರ ಪರಿಣಾಮ ಪುರಿ, ಗಜಪತಿ, ಗಂಜಾಮ್, ರಾಯಗಢ, ಕೊರಾಪುಟ್ ಮತ್ತು ಮಾಲ್ಕಾನ್‌ನಗಿರಿ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯ...

ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಿಗೆ ಬುಧವಾರ ಬೆಳಿಗ್ಗೆ ಅರ್ನಬ್ ಚಂಡಮಾರುತ ಅಪ್ಪಳಿಸಿದ್ದು, ಭಾರಿ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಈ ಚಂಡಮಾರುತದ ಪ್ರಭಾವದಿಂದಾಗಿ ಪುರಿ, ಗಜಪತಿ, ಗಂಜಾಮ್, ರಾಯಗಢ, ಕೊರಾಪುಟ್ ಮತ್ತು ಮಾಲ್ಕಾನ್‌ನಗಿರಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ಮಳೆ ಹಾಗೂ ಬಿರುಗಾಳಿಯ ಕಾರಣದಿಂದ ವಿವಿಧೆಡೆ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಈ ಅವಘಡಗಳಲ್ಲಿ ಭೀಮಾವರಂನ ಕಿಶೋರ್ ಕುಮಾರ್, ವಿಶಾಖಪಟ್ಟಣಂನ 53 ವರ್ಷದ ವ್ಯಕ್ತಿ ಹಾಗೂ ಅನಾಕಪಲ್ಲಿಯ 55 ವರ್ಷದ ಮಹಿಳೆ ಸೇರಿದಂತೆ ಒಟ್ಟು ಮೂವರು ಮೃತಪಟ್ಟಿದ್ದಾರೆ. ಅಲ್ಲದೆ ಭೀಮಾವರಂನಲ್ಲಿ ರಾಂಬಾಬು ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ.




