ಆಂಧ್ರಪ್ರದೇಶ: ಗೆಲುವಿನ ಸುದ್ದಿ ತಿಳಿಯುವ ಮುನ್ನವೇ ಹೃದಯಾಘಾತದಿಂದ ಅಭ್ಯರ್ಥಿ ದಿವ್ಯಾ ಸಾವು
ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ನಡೆದ MPTC ಮತ್ತು ZPTC ಚುನಾವಣೆಗಳ ಎಣಿಕೆ ಪ್ರಕ್ರಿಯೆ ಇಂದು ಮುಂದುವರೆದಿದೆ. ಈ ಸಂದರ್ಭದಲ್ಲಿ ಒಂದು ದುರಂತ ಘಟನೆ ನಡೆದಿದೆ. ಇಂದು ನಡೆದ ಮತ ಎಣಿಕೆಯಲ್ಲಿ ಜನ ಸೇನಾ ಪಕ್ಷದ (Janasena...

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಧುಮಂತುನಿ ಗುಡೆಮ್‌ನಲ್ಲಿ ನಡೆದ ಎಂಪಿಟಿಸಿ ಚುನಾವಣೆಯಲ್ಲಿ ಜನಸೇನಾ ಪಕ್ಷದ ಅಭ್ಯರ್ಥಿ ಗರಪತಿ ದಿವ್ಯಾ 350 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಆದರೆ ಮತ ಎಣಿಕೆಯ ಹಿಂದಿನ ದಿನವೇ ಅನಾರೋಗ್ಯದಿಂದ ಬಳಲುತ್ತಿದ್ದ 28 ವರ್ಷದ ದಿವ್ಯಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತೀವ್ರ ಹೊಟ್ಟೆ ನೋವಿನ ಕಾರಣದಿಂದ ರಾಜಮಂಡ್ರಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ದಿವ್ಯಾ ಅವರ ನಿಧನದಿಂದ ಅವರ ಐದು ಮತ್ತು ಮೂರು ವರ್ಷದ ಇಬ್ಬರು ಮಕ್ಕಳು ತಾಯಿಯನ್ನು ಕಳೆದುಕೊಂಡಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.




