ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಅಪರಾಧ

ಉಪ್ಪಿನಂಗಡಿ: ಕಾರಿಗೆ ಸೈಡ್ ಕೊಡುವ ವಿಚಾರದಲ್ಲಿ ಗಲಾಟೆ ವ್ಯಕ್ತಿಯ ಮೇಲೆ ಹಲ್ಲೆ ಪ್ರಕರಣ ದಾಖಲು

ಪಿರ್ಯಾಧಿದಾರರಾದ ರೋಲ್ಸನ್ ನೀಲ್ ಲುವಿನ್ ಪ್ರಾಯ: 29 ವರ್ಷ, ಕುಕ್ಕಾಜೆ ಮನೆ, ಮಂಚಿ ಗ್ರಾಮ, ಬಂಟ್ವಾಳ ತಾಲೂಕು ಹಾಲಿ .10.2026 ರಂದು KA 21 M 9961 ಕಾರಲ್ಲಿ ಡಾ ಸುಪ್ರಿತ್ ರವರನ್ನು ಉಪ್ಪಿನಂಗಡಿ ಭಟ್ಸ್ ನರ್ಸಿಂಗ್...

· 1 ನಿಮಿಷ ಓದು· ದಕ್ಷಿಣ ಕನ್ನಡ
ಹಂಚಿಕೊಳ್ಳಿ:

ಪಿರ್ಯಾಧಿದಾರರಾದ ರೋಲ್ಸನ್ ನೀಲ್ ಲುವಿನ್ ಪ್ರಾಯ: 29 ವರ್ಷ, ಕುಕ್ಕಾಜೆ ಮನೆ, ಮಂಚಿ ಗ್ರಾಮ, ಬಂಟ್ವಾಳ ತಾಲೂಕು ಹಾಲಿ .10.2026 ರಂದು KA 21 M 9961 ಕಾರಲ್ಲಿ ಡಾ ಸುಪ್ರಿತ್ ರವರನ್ನು ಉಪ್ಪಿನಂಗಡಿ ಭಟ್ಸ್ ನರ್ಸಿಂಗ್ ಹೋಂ ನಿಂದ ಕರೆದುಕೊಂಡು ಹೋಗುತ್ತಾ ಸಮಯ ಸುಮಾರು ಮದ್ಯಾಹ್ನ 13:30 ಗಂಟೆಗೆ ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಧ್ಯಾನ್ ಎಂಟರ್ ಪ್ರೈಸಸ್ ಅಂಗಡಿಯ ಎದುರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಪಿರ್ಯಾದಿದಾರರ ಕಾರಿನ ಹಿಂದುಗಡೆಯಿಂದ KA 19 MG 9697 ನೇ ಕಾರನ್ನು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಜೋರಾಗಿ ಹಾರ್ನ್ ಹಾಕಿದಾಗ ಪಿರ್ಯಾದಿದಾರರು ಕೈಯಿಂದ ನಿಧಾನವಾಗಿ ಬರಲು ಸಂಜ್ಞೆ ಮಾಡಿದಾಗ ಕಾರು ಚಾಲಕ ಪಿರ್ಯಾದಿದಾರರ ಕಾರನ್ನು ಅಡ್ಡಕಟ್ಟಿ ಅಕ್ರಮವಾಗಿ ತಡೆದು ಕಾಲರ್ ಗೆ ಕೈ ಹಾಕಿ ಚಾಲಕ ಸೀಟಿನಿಂದ ಇಳಿಯಲು ಹೇಳಿ ಮುಖಕ್ಕೆ ಮಾರಣವಾಂತಿಕವಾಗಿ ಕೈಯಿಂದ ಮುಷ್ಟಿ ಹಿಡಿದು ಹೊಡೆದು ಕಾಲಿನಿಂದ ತುಳಿದು ಕಣ್ಣಿಗೆ ತಲೆಗೆ ರಕ್ತಸ್ರಾವವಾಗುವಂತೆ ಹೊಡೆದಿರುತ್ತಾನೆ. ಹಲ್ಲೆಯ ಪರಿಣಾಮವಾಗಿ ಪಿಯಾದಿದಾರರು ರಸ್ತೆಗೆ ಬಿದ್ದಾಗ ದಿಶಾ ಅಂಗಡಿಯಲ್ಲಿದ್ದ ರಾಜೇಶ್ ಮತ್ತು ಸಂದಿಪ್ ಬಂದು ಗಲಾಟೆ ಬಿಡಿಸಿರುತ್ತಾರೆ. ಆದುದರಿಂದ ಪಿರ್ಯಾದಿದಾರರ ಕಾರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ ಕೈಯಿಂದ ಹಲ್ಲೆ ನಡೆಸಿದ ಕಾರು ನಂಬ್ರ KA 19 MG 9697 ನೇದರ ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬಿತ್ಯಾದಿ. ಈ ಬಗ್ಗೆ ಉಪ್ಪಿನಂಗಡಿ ಠಾಣಾ ಅ.ಕ್ರ: 137/2026 ಕಲಂ: 126(2), 115(2) BNS-2023 ಯಂತೆ ಪ್ರಕರಣ ದಾಖಲಾಗಿರುತ್ತದೆ.

ಹಂಚಿಕೊಳ್ಳಿ: