ನ್ಯೂಯಾರ್ಕ್‌ನಲ್ಲಿ 5 ವರ್ಷದ ಬಾಲಕಿ ಸಾವು, ಅಂತ್ಯಕ್ರಿಯೆಗೆ ನೆರವು ಕೋರಿದ ತಂದೆ
ನ್ಯೂಯಾರ್ಕ್‌ನ ಕ್ವೀನ್ಸ್‌ನಲ್ಲಿ ಐದು ವರ್ಷದ ಫಬಿಯಾನಾ ಕಾಬೆಲ್ಲೊ ಮೃತಪಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ತಾಯಿಯ ವಿರುದ್ಧ ಕೊ*ಲೆ ಆರೋಪ ದಾಖಲಾಗಿದೆ. ಭಾರತೀಯ ಮೂಲದ ತಂದೆ ಕುಲದೀಪ್ ಸಿಂಗ್, ಮಗಳ ಅಂತ್ಯಕ್ರಿಯ...

ಅಮೆರಿಕದ ನ್ಯೂಯಾರ್ಕ್‌ನ ಕ್ವೀನ್ಸ್ ಪ್ರದೇಶದಲ್ಲಿ ಐದು ವರ್ಷದ ಬಾಲಕಿ ಫಬಿಯಾನಾ ಕಾಬೆಲ್ಲೊ ಮೃತಪಟ್ಟಿದ್ದಾಳೆ. ಈ ಪ್ರಕರಣದಲ್ಲಿ ಬಾಲಕಿಯ ತಾಯಿ ಫ್ರಾನ್ಸಿಸ್ ಕಾಬೆಲ್ಲೊ ಮೇಲೆ ಕೊಲೆ ಆರೋಪ ಹೊರಿಸಲಾಗಿದ್ದು ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಮಗಳ ಅಕಾಲಿಕ ನಿಧನದಿಂದ ತೀವ್ರ ಆಘಾತಕ್ಕೊಳಗಾಗಿರುವ ತಂದೆ ಕುಲದೀಪ್ ಸಿಂಗ್, ಮಗಳ ಅಂತಿಮ ಸಂಸ್ಕಾರಕ್ಕಾಗಿ GoFundMe ಮೂಲಕ 18,000 ಅಮೆರಿಕನ್ ಡಾಲರ್ ಹಣ ಸಂಗ್ರಹಿಸಲು ಸಾರ್ವಜನಿಕರ ಸಹಾಯ ಕೋರಿದ್ದಾರೆ. ಉಬರ್ ಚಾಲಕರಾಗಿ ಕೆಲಸ ಮಾಡುವ ಕುಲದೀಪ್ ಸಿಂಗ್, ಆರ್ಥಿಕ ಸಂಕಷ್ಟದ ನಡುವೆ ಮಗಳಿಗೆ ಗೌರವಯುತ ವಿದಾಯ ನೀಡಲು ಪ್ರಯತ್ನಿಸುತ್ತಿದ್ದಾರೆ.




