ಹಿರಿಯಡ್ಕ: ಪೆರ್ಡೂರಿನಲ್ಲಿ ನೇಣು ಬಿಗಿದುಕೊಂಡು ವೆಲ್ಡಿಂಗ್ ಕೆಲಸಗಾರ ಆತ್ಮಹತ್ಯೆ
ಹಿರಿಯಡ್ಕದ ಪೆರ್ಡೂರು ಗ್ರಾಮದ ಬಂಗ್ರಬೈಲಿನಲ್ಲಿ ಕೃಷ್ಣರಾಜ ಎಂಬುವವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ, ಕೃಷ್ಣರಾಜ ಅವರು...

ಹಿರಿಯಡ್ಕದ ಪೆರ್ಡೂರು ಗ್ರಾಮದ ಬಂಗ್ರಬೈಲಿನಲ್ಲಿ ಕೃಷ್ಣರಾಜ ಎಂಬುವವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಕೃಷ್ಣರಾಜ ಅವರು ತನ್ನ ತಾಯಿ ಗುಲಾಬಿ ಅವರೊಂದಿಗೆ ವಾಸವಾಗಿದ್ದು, ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದರು. ದಿನಾಂಕ 21/10/2026 ರಂದು ಬೆಳಗ್ಗೆ ಕೃಷ್ಣರಾಜ ಅವರು ಕೆಲಸಕ್ಕೆಂದು ಮನೆಯಿಂದ ಹೊರ ಹೋಗಿದ್ದರು.
ಅದೇ ದಿನ ಸಂಜೆ 3:30 ಗಂಟೆಗೆ ತಾಯಿ ಕೆಲಸ ಮುಗಿಸಿ ಮನೆಗೆ ವಾಪಸಾದಾಗ, ಕೃಷ್ಣರಾಜ ಅವರು ಸೀರೆಯ ಸಹಾಯದಿಂದ ಮನೆಯ ಮರದ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಘಟನೆ ಸಂಬಂಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 37/2026 ಹಾಗೂ ಕಲಂ 194 ಬಿಎನ್‌ಎಸ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತನಿಖೆಯ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
ಹಿರಿಯಡ್ಕ ಪೊಲೀಸ್ ಠಾಣೆ



