ಮುಂಬೈನ ಜುಹುನಲ್ಲಿ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ: ದಿಶಾ ಪಟಾಣಿ ಭೇಟಿ
ದಿಶಾ ಕಾರಿನಿಂದ ಇಳಿದ ಬಳಿಕ ಪಾಪರಾಜಿಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸದೆ ನೇರವಾಗಿ ಮನೆಯೊಳಗೆ ತೆರಳಿರುವ ದೃಶ್ಯ ಚರ್ಚೆಗೆ ಕಾರಣವಾಗಿದೆ. ಮಾಜಿ ಪ್ರಿಯಕರನ ಕಷ್ಟದ ಸಮಯದಲ್ಲಿ ದಿಶಾ ಭೇಟಿ ನೀಡಿರುವುದು ಅವರ ಅಭಿಮಾನಿಗಳಲ್ಲ...

ಮುಂಬೈನ ಜುಹು ಪ್ರದೇಶದಲ್ಲಿ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಬೈಕ್ ಸವಾರರು ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ನಟ ಸುರಕ್ಷಿತವಾಗಿದ್ದರೂ, ಅವರ ಚಾಲಕ ಮತ್ತು ಆಟೋ ಚಾಲಕನಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಟೈಗರ್ ಶ್ರಾಫ್ ತಾವೇ ನಾನಾವತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ದಾಳಿಯ ಸುದ್ದಿ ತಿಳಿಯುತ್ತಿದ್ದಂತೆ ನಟಿ ದಿಶಾ ಪಟಾಣಿ ಅವರು ಟೈಗರ್ ಶ್ರಾಫ್ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದು, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಹೆಸರು ಕೇಳಿಬಂದಿದೆ.




