ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಅಪರಾಧ

ಮುಂಬೈ: ಟೈಗರ್ ಶ್ರಾಫ್ ದಾಳಿ ಪ್ರಕರಣದಲ್ಲಿ ಅಮಿತಾಭ್, ಅಕ್ಷಯ್, ಆಮಿರ್ ಹೆಸರೂ ಪತ್ತೆ

ಹಿರಿಯ ನಟರನ್ನು ತಲುಪುವುದು ಕಷ್ಟವಾದ ಹಿನ್ನೆಲೆಯಲ್ಲಿ, ತುಸು ಕಡಿಮೆ ಭದ್ರತೆ ಹೊಂದಿರಬಹುದಾದ ಯುವ ನಟರನ್ನು ಗುರಿಯಾಗಿಸಲು ಆರೋಪಿಗಳು ಮುಂದಾಗಿದ್ದರು ಎಂಬ ಶಂಕೆಯೂ ವ್ಯಕ್ತವಾಗಿದೆ. ಇದೇ ಹಿನ್ನೆಲೆಯಲ್ಲಿ ಟೈಗರ್ ಶ್ರಾಫ್...

Tiger: ಟೈಗರ್ ಶ್ರಾಫ್ ಅಲ್ಲ, ಬಾಲಿವುಡ್ ಬೇರೆ ಸ್ಟಾರ್ ನಟರು ಹಿಟ್ ಲಿಸ್ಟ್‌ನಲ್ಲಿದ್ದರು.. ಆದ್ರೆ ಟೈಗರ್ 'ಟಾರ್ಗೆಟ್' ಆಗಿದ್ದು ಹೇಗೆ?
ಹಂಚಿಕೊಳ್ಳಿ:

ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದ ತನಿಖೆ ವೇಳೆ ಹಲವು ಬಾಲಿವುಡ್ ನಟರಿಗೆ ಬೆದರಿಕೆ ಇರುವುದು ಬೆಳಕಿಗೆ ಬಂದಿದೆ. ಬಂಧಿತ ನಾಲ್ವರು ಆರೋಪಿಗಳು ಆರಂಭದಲ್ಲಿ ಸಲ್ಮಾನ್ ಖಾನ್ ಅವರ ಮನೆಯ ಮೇಲೆ ಕಣ್ಣಿಟ್ಟಿದ್ದರು, ಆದರೆ ಬಿಗಿ ಭದ್ರತೆಯ ಕಾರಣದಿಂದ ಆ ಪ್ರಯತ್ನ ಕೈಬಿಟ್ಟಿದ್ದರು. ಬಳಿಕ ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್ ಮತ್ತು ಆಮಿರ್ ಖಾನ್ ಅವರ ನಿವಾಸಗಳ ಮೇಲೆ ನಿಗಾ ಇರಿಸಲು ಆಟೋ ಚಾಲಕರ ಸಹಾಯ ಪಡೆದಿದ್ದರು ಎಂದು ತಿಳಿದುಬಂದಿದೆ. ಹಿರಿಯ ನಟರ ಭದ್ರತೆಯನ್ನು ಭೇದಿಸುವುದು ಕಷ್ಟವಾದ ಹಿನ್ನೆಲೆಯಲ್ಲಿ, ಆರೋಪಿಗಳು ಟೈಗರ್ ಶ್ರಾಫ್ ಅವರನ್ನು ಗುರಿಯಾಗಿಸಿಕೊಂಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ನಟರ ನಿವಾಸದ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಹಂಚಿಕೊಳ್ಳಿ: