ಗದಗ: ಹಣಕಾಸಿನ ವಿವಾದಕ್ಕೆ ಸ್ನೇಹಿತನನ್ನೇ ಕೊಲೆಗೈದ ಶರಣಪ್ಪ
ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಹಣಕಾಸಿನ ವಿಚಾರಕ್ಕೆ ಕುಚಿಕು ಗೆಳೆಯನನ್ನೇ ವ್ಯಕ್ತಿಯೋರ್ವ ಕೊಂದಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಸುರಕೋಡ ಗ್ರಾಮದಲ್ಲಿ ನಡೆದಿದೆ. ಕೊಲೆ ಮಾಡಿದ ಬಳಿಕ ಮೃತನ ಮನೆಗೇ ತೆರಳಿ...

ಗದಗ ಜಿಲ್ಲೆಯ ಸುರಕೋಡ ಗ್ರಾಮದಲ್ಲಿ ದ್ಯಾಮಪ್ಪ ಗೊಜನೂರು ಎಂಬುವವರನ್ನು ಅವರ ಸ್ನೇಹಿತ ಶರಣಪ್ಪ ನರಗುಂದ ಕೊಲೆ ಮಾಡಿದ್ದಾನೆ. ದ್ಯಾಮಪ್ಪನಿಗೆ ಸೇರಿದ್ದ 45 ಕ್ವಿಂಟಾಲ್ ಕಡಲೆಯನ್ನು ಶರಣಪ್ಪ ಮಾರಾಟ ಮಾಡಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದ. ಈ ವಿಷಯ ದ್ಯಾಮಪ್ಪನಿಗೆ ತಿಳಿಯಬಾರದೆಂಬ ಕಾರಣಕ್ಕೆ ಆರೋಪಿ ಅವರನ್ನು ಕೊಡಲಿಯಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ದ್ಯಾಮಪ್ಪನ ಮನೆಗೆ ತೆರಳಿದ್ದ ಶರಣಪ್ಪ, ಅಲ್ಲಿ ಉಪ್ಪಿಟ್ಟು ಸವಿದಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಅಕ್ಟೋಬರ್ 8ರಂದು ನಾಪತ್ತೆಯಾಗಿದ್ದ ದ್ಯಾಮಪ್ಪ ಅವರ ಮೃತದೇಹ ಅಕ್ಟೋಬರ್ 19ರಂದು ಕಾಲುವೆಯಲ್ಲಿ ಪತ್ತೆಯಾಗಿತ್ತು.




