ಮುಖ್ಯ ವಿಷಯಕ್ಕೆ ಹೋಗಿ
The Karnataka Today
8 Oct
ಸುದ್ದಿ
ಸಿನಿಮಾ

ಸನ್‌ ಉದಯದಲ್ಲಿ ನವಶಕ್ತಿ ವೈಭವ ದೈವೀಕ ಕಥಾ ಸರಣಿ, ಅಕ್ಟೋಬರ್‌ 11 ರಿಂದ ವೀಕ್ಷಿಸಲು ರೆಡಿಯಾಗಿ

ಸನ್ ಉದಯ ವಾಹಿನಿಯು ದಸರಾ ಮತ್ತು ದೀಪಾವಳಿ ಹಬ್ಬಗಳ ಪ್ರಯುಕ್ತ 'ನವಶಕ್ತಿ ವೈಭವ' ಎಂಬ ವಿಶೇಷ ದೈವೀಕ ಕತೆಗಳ ಸರಣಿಯನ್ನು ಪ್ರಸಾರ ಮಾಡಲಿದೆ. ಕರ್ನಾಟಕದ 9 ಪ್ರಸಿದ್ಧ ದೇವಿ ಕ್ಷೇತ್ರಗಳಲ್ಲಿ ಚಿತ್ರೀಕರಣಗೊಂಡಿರುವ ಈ ಸರಣಿಯಲ...

· ಮೈಸೂರು
ಸನ್‌ ಉದಯದಲ್ಲಿ ನವಶಕ್ತಿ ವೈಭವ ದೈವೀಕ ಕಥಾ ಸರಣಿ, ಅಕ್ಟೋಬರ್‌ 11 ರಿಂದ ವೀಕ್ಷಿಸಲು ರೆಡಿಯಾಗಿ
ಹಂಚಿಕೊಳ್ಳಿ:

ಸನ್ ಉದಯ ವಾಹಿನಿಯು ದಸರಾ ಮತ್ತು ದೀಪಾವಳಿ ಹಬ್ಬಗಳ ಪ್ರಯುಕ್ತ 'ನವಶಕ್ತಿ ವೈಭವ' ಎಂಬ ವಿಶೇಷ ದೈವೀಕ ಕತೆಗಳ ಸರಣಿಯನ್ನು ಪ್ರಸಾರ ಮಾಡಲಿದೆ. ಕರ್ನಾಟಕದ 9 ಪ್ರಸಿದ್ಧ ದೇವಿ ಕ್ಷೇತ್ರಗಳಲ್ಲಿ ಚಿತ್ರೀಕರಣಗೊಂಡಿರುವ ಈ ಸರಣಿಯಲ್ಲಿ ವಾಹಿನಿಯ 9 ಜನಪ್ರಿಯ ನಾಯಕಿಯರು ದೇವಿಯ ಅಂಶವಾಗಿ ಕಾಣಿಸಿಕೊಳ್ಳಲಿದ್ದಾರೆ.

ಹೊಸ ಬಗೆಯ ಕೌಟುಂಬಿಕ ಧಾರಾವಾಹಿಗಳ ಮೂಲಕ ಕನ್ನಡಿಗರ ಮನೆಮಾತಾಗಿರುವ 'ಸನ್ ಉದಯ' ವಾಹಿನಿ ದಸರಾ ಮತ್ತು ದೀಪಾವಳಿ ಹಬ್ಬಗಳ ಸಂಭ್ರಮಕ್ಕೆ ವಿಶೇಷ ದೈವೀಕ ಕತಗಳ ಪ್ರಸಾರ ಮಾಡಲಿದೆ. ‘ನವಶಕ್ತಿ ವೈಭವ’ ವಿಶೇಷ ಸಂಚಿಕೆಗಳ ಸರಣಿ ಅಕ್ಟೋಬರ್ 11 ರಿಂದ ಪ್ರತಿ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

ಕರ್ನಾಟಕದ ಪ್ರಸಿದ್ಧ ಒಂಭತ್ತು ದೇವಿ ಕ್ಷೇತ್ರಗಳ ಹಿನ್ನೆಲೆಯಲ್ಲಿ ನಡೆಯುವ ಈ ದೈವೀಕ ಕತೆಗಳಲ್ಲಿ ವಾಹಿನಿಯ ಜನಪ್ರಿಯ ಧಾರಾವಾಹಿಗಳಾದ ರಥಸಪ್ತಮಿ, ಮಹಾಲಕ್ಷ್ಮೀ ಮದುವೆ, ಗೆಳತಿ ಗಾಯತ್ರಿ, ಮೂಗುತಿ ಮಲ್ಲಿ, ಶಾಂತಿ ನಿವಾಸ, ಮಾಂಗಲ್ಯ, ಕೃಷ್ಣವಂಶಿ ಹಾಗೂ ಮೈನಾ ಧಾರಾವಾಹಿಗಳ 9 ನಾಯಕಿಯರು ದೇವಿಯ ಅಂಶವಾಗಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ.. ಮೈಸೂರು, ಕೊಲ್ಲೂರು, ಕಟೀಲು, ಶಿರಸಿ, ಸವದತ್ತಿ ಸೇರಿದಂತೆ ರಾಜ್ಯದ ಪವಿತ್ರ ಕ್ಷೇತ್ರಗಳಲ್ಲೇ ಈ ಸಂಚಿಕೆಗಳ ಚಿತ್ರೀಕರಣ ನಡೆದಿರುವುದು ಕಾರ್ಯಕ್ರಮದ ಪ್ರಮುಖ ಆಕರ್ಷಣೆ.

ಇದು ಕೇವಲ ಪವಾಡಗಳ ನಂಬಿಕೆಯಷ್ಟೇ ಅಲ್ಲ; ಹೆಣ್ಣಿನ ಅಂತಃಶಕ್ತಿ, ಬುದ್ಧಿಮತ್ತೆ ಮತ್ತು ಆತ್ಮವಿಶ್ವಾಸವನ್ನು ಜಾಗೃತಗೊಳಿಸುವ ಕಥಾಹಂದರ. ದೈವೀಕ ಶಕ್ತಿಯೆಂಬುದು ಪ್ರತಿಯೊಬ್ಬ ಸ್ತ್ರೀಯಲ್ಲೂ ಅಡಗಿರುತ್ತದೆ ಮತ್ತು ಮಹಿಳಾ ಶಕ್ತಿಯನ್ನು ದಮನಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಶಕ್ತಿಶಾಲಿ ಸಂದೇಶವನ್ನು ಈ ಕತೆಗಳು ಸಾರಲಿವೆ ಎಂದು ಸನ್‌ ಉದಯ ಮುಖ್ಯಸ್ಥರು ತಿಳಿಸಿದ್ದಾರೆ.

‘ನವಶಕ್ತಿ ವೈಭವ’ ಸರಣಿಯ ಮೊದಲ ಸಂಚಿಕೆಯಾಗಿ ಅಕ್ಟೋಬರ್‌ 11ರ ಭಾನುವಾರ ರಾತ್ರಿ 9 ಕ್ಕೆ ‘ರಥಸಪ್ತಮಿ’ ವಿಶೇಷ ಸಂಚಿಕೆ ಪ್ರಸಾರವಾಗಲಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈ ಸಂಚಿಕೆಯ ಶೂಟಿಂಗ್ ನಡೆದಿದೆ. ಮೈಕ್ರೋಫೈನಾನ್ಸ್‌ ಸಾಲದ ಬಲೆಗೆ ಬಿದ್ದು ನಲುಗುತ್ತಿರುವ ಬಡ ಶಿಕ್ಷಕಿ ಹಾಗೂ ಆಕೆಯ ಮಗಳನ್ನು ಕಾಪಾಡಲು, ನಾಯಕಿ 'ಸಪ್ತಮಿ' ತನ್ನ ಬುದ್ಧಿಶಕ್ತಿ ಮತ್ತು ಅಚಲ ಆತ್ಮಬಲವನ್ನೇ ಆಯುಧವನ್ನಾಗಿಸಿಕೊಂಡು ದುಷ್ಟರನ್ನು ಹೇಗೆ ಮರ್ದಿಸುತ್ತಾಳೆ ಎಂಬುದು ಇದರ ಮುಖ್ಯ ತಿರುಳು.

ಮೊದಲ ಸಂಚಿಕೆಯಲ್ಲಿ 'ರಥಸಪ್ತಮಿ' ಖ್ಯಾತಿಯ ಮೌಲ್ಯ ಗೌಡ ಹಾಗೂ ನಾಯಕ ಜೀವನ್ ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದಾರೆ. ಇವರೊಂದಿಗೆ ಸ್ವಪ್ನಾ ರಾಜ್‌, ಸುದರ್ಶನ್‌, ಇಶಿಕಾ ಮುಂತಾದ ಜನಪ್ರಿಯ ಕಲಾವಿದರು ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  • ಕಾರ್ಯಕ್ರಮ: ‘ನವಶಕ್ತಿ ವೈಭವ’ (ಒಂದು ಗಂಟೆಯ ವಿಶೇಷ ಸಂಚಿಕೆ)
  • ದಿನಾಂಕ: ಅಕ್ಟೋಬರ್‌ 11 ರಿಂದ (ಪ್ರತಿ ಭಾನುವಾರ)
  • ಸಮಯ: ರಾತ್ರಿ 9:00 ಗಂಟೆಗೆ
  • ವಾಹಿನಿ: ಸನ್ ಉದಯ (Sun Udaya)
ಹಂಚಿಕೊಳ್ಳಿ: