ಮುಖ್ಯ ವಿಷಯಕ್ಕೆ ಹೋಗಿ
The Karnataka Today
15 Oct
ಸುದ್ದಿ
ಸಿನಿಮಾ

ನಟ ಇಮ್ರಾನ್ ಖಾನ್‌ಗೆ ನೋಟಿಸ್: ಅ.28ರೊಳಗೆ ಭಾರತ ತೊರೆಯಲು ಮುಂಬೈ ಪೊಲೀಸರ ಆದೇಶ

ಅಕ್ಟೋಬರ್ 28ರೊಳಗೆ ಭಾರತ ಬಿಟ್ಟು ತೊರೆಯಲು ಪೊಲೀಸರು ನಟ ಇಮ್ರಾನ್ ಖಾನ್‌ಗೆ ನೋಟಿಸ್ ನೀಡಿದ್ದಾರೆ. ಗ್ಯಾನೇಶ್ ಕುಮಾರ್ ಹೋರಾಟದಲ್ಲಿ ಪಾಲ್ಗೊಂಡ ನಟ ಆಮೀರ್ ಖಾನ್ ಆಪ್ತ ಸಂಬಂಧಿಗೆ ಇದೀಗ ಸಂಕಷ್ಟ ಹೆಚ್ಚಾಗಿದೆ.

ಅ.28ರೊಳಗೆ ಭಾರತ ತೊರೆಯಬೇಕು, CEC ಹೋರಾಟದಲ್ಲಿ ಪಾಲ್ಗೊಂಡ ನಟ ಇಮ್ರಾನ್‌ಗೆ ನೋಟಿಸ್
ಹಂಚಿಕೊಳ್ಳಿ:

ಚುನಾವಣಾ ಮುಖ್ಯ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಮುಂಬೈನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನಟ ಇಮ್ರಾನ್ ಖಾನ್‌ಗೆ ಮುಂಬೈ ಪೊಲೀಸರು ಭಾರತ ಬಿಟ್ಟು ತೊಲಗುವಂತೆ ನೋಟಿಸ್ ನೀಡಿದ್ದಾರೆ. ಅಮೆರಿಕದ ಪ್ರಜೆಯಾಗಿರುವ ಇಮ್ರಾನ್ ಖಾನ್ ಭಾರತದ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಿದ್ದನ್ನು ಪ್ರಶ್ನಿಸಿ ಬಿಜೆಪಿ ಸಂಸದ ಕೀರ್ತಿ ಸೊಮಯ್ಯ ನೀಡಿದ್ದ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ವಿದೇಶಿಗರು ಇಂತಹ ಪ್ರತಿಭಟನೆಗಳಲ್ಲಿ ಭಾಗವಹಿಸುವಂತಿಲ್ಲ ಎಂಬ ನಿಯಮದ ಅನ್ವಯ, ಅಕ್ಟೋಬರ್ 28ರ ಗಡುವಿನೊಳಗೆ ದೇಶ ತೊರೆಯುವಂತೆ ಅವರಿಗೆ ಸೂಚಿಸಲಾಗಿದೆ.

ಹಂಚಿಕೊಳ್ಳಿ: