ಪ್ಯೋಂಗ್ಯಾಂಗ್ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿ ಬಗ್ಗೆ ಹರಿದಾಡುತ್ತಿವೆ ವದಂತಿಗಳು
ಕಿಮ್ ಜಾಂಗ್ ಉನ್ ಹಿನ್ನೆಲೆ, ಅಧಿಕಾರಕ್ಕೆ ಬಂದ ನಂತರ ಸಂಬಂಧಿಗಳನ್ನೇ ಮುಗಿಸಿದ ಕ್ರೂರ ಕಥನ. ಉತ್ತರ ಕೊರಿಯಾದಲ್ಲಿ ಜಾರಿಯಲ್ಲಿರುವ ಹೇರ್‌ಸ್ಟೈಲ್‌ನಿಂದ ಇಂಟರ್ನೆಟ್‌ವರೆಗೆ ಸರ್ಕಾರದ ನಿಯಂತ್ರಣ ಮತ್ತು ಕಠಿಣ ಶಿಕ್ಷೆಗಳ ಬಗ...

ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಮೆದುಳಿನ ರಕ್ತಸ್ರಾವದಿಂದಾಗಿ ಕೋಮಾದಲ್ಲಿದ್ದಾರೆ ಎಂಬ ಚರ್ಚೆಗಳು ಜಾಗತಿಕ ಮಟ್ಟದಲ್ಲಿ ಶುರುವಾಗಿವೆ. 2011ರಲ್ಲಿ ಅಧಿಕಾರಕ್ಕೇರಿದ ಕಿಮ್ ತನ್ನ ಕುಟುಂಬದ ಸದಸ್ಯರನ್ನೇ ಹತ್ಯೆ ಮಾಡಿಸಿದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅಲ್ಲಿನ ಕಠಿಣ ಕಾನೂನುಗಳ ಪ್ರಕಾರ ವಿದೇಶಿ ಸಂಸ್ಕೃತಿ ಮತ್ತು ಇಂಟರ್ನೆಟ್ ಬಳಕೆಗೆ ನಿಷೇಧವಿದ್ದು, ನಿಯಮ ಉಲ್ಲಂಘಿಸಿದರೆ ಮರಣದಂಡನೆ ವಿಧಿಸಲಾಗುತ್ತದೆ. ಸದ್ಯ ಕಿಮ್ ಅವರ ಮಗಳು ಕಿಮ್ ಜು-ಏ ಮತ್ತು ಸಹೋದರಿ ಕಿಮ್ ಯೋ ಜಾಂಗ್ ಉತ್ತರಾಧಿಕಾರತ್ವದ ರೇಸ್‌ನಲ್ಲಿ ಪ್ರಮುಖರಾಗಿದ್ದಾರೆ ಎಂದು ದಕ್ಷಿಣ ಕೊರಿಯಾದ ಗುಪ್ತಚರ ಸಂಸ್ಥೆ ವರದಿ ಮಾಡಿದೆ.




