ಹಾರ್ಮುಜ್ ಜಲಸಂಧಿಯಲ್ಲಿ ಮುಳುಗಿದ ಜಿಎಫ್ಎಸ್ ಪ್ರೈಡ್ ಹಡಗು: ಸಮುದ್ರದಲ್ಲಿ ತೇಲಿದ ಐಫೋನ್ ಬಾಕ್ಸ್ಗಳು
ಸಿಂಗಾಪುರ ಧ್ವಜವನ್ನು ಹೊಂದಿದ್ದ 'ಜಿಎಫ್ಎಸ್ ಪ್ರೈಡ್' ಕಂಟೈನರ್ ಹಡಗು 2,500ಕ್ಕೂ ಅಧಿಕ ಕಂಟೈನರ್ಗಳನ್ನು ಹೊತ್ತುಕೊಂಡು ಸಾಗುತ್ತಿದ್ದ ವೇಳೆ ಹಾರ್ಮುಜ್ ಜಲಸಂಧಿ ಬಳಿ ಮುಳುಗಿದೆ. ಹಡಗು ಜಲಸಮಾಧಿಯಾಗುವ ಮುನ್ನ ಅದರಲ್ಲಿ...

ಹಾರ್ಮುಜ್ ಜಲಸಂಧಿಯಲ್ಲಿ ಸಿಂಗಾಪುರದ ಜಿಎಫ್ಎಸ್ ಪ್ರೈಡ್ ಸರಕು ಸಾಗಣೆ ಹಡಗು ಜಲಸಮಾಧಿಯಾಗಿದೆ. ಅಪಘಾತಕ್ಕೂ ಮುನ್ನ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು, ಆದರೆ ಅದೃಷ್ಟವಶಾತ್ ಎಲ್ಲಾ 21 ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. 2,500ಕ್ಕೂ ಹೆಚ್ಚು ಕಂಟೈನರ್ಗಳನ್ನು ಹೊತ್ತಿದ್ದ ಹಡಗು ಮುಳುಗಿದ ಪರಿಣಾಮ ಅದರಲ್ಲಿದ್ದ ಐಫೋನ್ಗಳು ಮತ್ತು ದುಬಾರಿ ಸುಗಂಧ ದ್ರವ್ಯಗಳು ಸಮುದ್ರದಲ್ಲಿ ತೇಲುತ್ತಿವೆ. ಈ ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸಲು ಸ್ಥಳೀಯ ಮೀನುಗಾರರು ಮತ್ತು ಜನರು ದೋಣಿಗಳಲ್ಲಿ ತೆರಳಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.




