ಅಮೆರಿಕದ ಬೆಂಡ್ ನಗರದ ಶಾಲೆಯಲ್ಲಿ 16 ವರ್ಷದ ಬಾಲಕನ ಗುಂಡಿನ ದಾಳಿ: ಐವರು ಸಾವು
ಅಮೆರಿಕದ ಒರೆಗಾನ್ನ ಬೆಂಡ್ ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಮಕ್ಕಳು, ಒಬ್ಬ ಶಿಕ್ಷಕ ಸೇರಿ ಐವರು ಸಾವನ್ನಪ್ಪಿದ್ದಾರೆ. 16 ವರ್ಷದ ಅಪ್ರಾಪ್ತ ಶೂಟರ್ ಈ ಕೃತ್ಯ ಎಸಗಿದ್ದು, ಸ್ಥಳೀಯರ ಪ್ರತಿರೋಧಕ್ಕೆ ಬಲಿಯಾಗಿ...

ಅಮೆರಿಕದ ಒರೆಗಾನ್ ಪ್ರಾಂತ್ಯದ ಬೆಂಡ್ ನಗರದಲ್ಲಿರುವ ಸಿಲ್ವರ್ ರೈಲ್ ಎಲಿಮೆಂಟರಿ ಶಾಲೆಯಲ್ಲಿ 16 ವರ್ಷದ ಬಾಲಕ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮಕ್ಕಳು ಮತ್ತು ಒಬ್ಬ ಶಿಕ್ಷಕ ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಾಯಗೊಂಡ 7 ವರ್ಷದ ಬಾಲಕಿ ಮತ್ತು 54 ವರ್ಷದ ಶಿಕ್ಷಕಿಯೊಬ್ಬರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಾಲೆಯೊಳಗೆ ನುಗ್ಗಿದ ಶೂಟರ್ ಅನ್ನು ಸ್ಥಳೀಯ ವ್ಯಕ್ತಿಯೊಬ್ಬರು ಗುಂಡಿಕ್ಕಿ ಕೊಂದಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆಯ ತನಿಖೆಗೆ ಬೆಂಡ್ ಪೊಲೀಸರೊಂದಿಗೆ ಎಫ್ಬಿಐ ವಿಶೇಷ ಅಧಿಕಾರಿಗಳು ಕೈಜೋಡಿಸಿದ್ದಾರೆ.




