ಮುಖ್ಯ ವಿಷಯಕ್ಕೆ ಹೋಗಿ
The Karnataka Today
29 Sept
Latest
ಭಾರತ

ಸಂಚಾರಿ ನಿಯಮ ಉಲ್ಲಂಘನೆ ದಂಡ ವಸೂಲಾತಿ ಬಾಕಿ ವಿದ್ಯುತ್ ಬಿಲ್ ಜೊತೆಗೆ ಲಿಂಕ್ ಸುಪ್ರೀಂಕೋರ್ಟ್ ಸಲಹೆ

'ಇ-ಚಲನ್' ದಂಡದ ಮೊತ್ತವನ್ನು ವಸೂಲಿ ಮಾಡಲು, ಅದನ್ನು ವಿದ್ಯುತ್ ಬಿಲ್‌ಗಳೊಂದಿಗೆ ಲಿಂಕ್ ಮಾಡುವಂತೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ. ಟ್ರಾಫಿಕ್ ನಿಯಮ ಉಲ್ಲಂಘನೆಗೆ ಕೇವಲ 'ಇ-ಚಲನ್' ನೀಡಿದರೆ ಸಾಕಾಗುವುದಿಲ್ಲ. ದಂಡದ ಮೊತ್ತವನ್ನು ವಸೂಲಿ ಮಾಡುವುದೇ ನಿಜವಾದ ಸವಾಲು ಆಗಿದೆ. ಹೀಗಾಗಿ ಬಾಕಿ ದಂಡ ವಸೂಲಿ ಮಾಡಲು, ಅದನ್ನು ವಿದ್ಯುತ್ ಬಿಲ್‌ಗಳೊಂದಿಗೆ ಲಿಂಕ್ ಮಾಡುವಂತಹ ಕಠಿಣ ಕ್ರಮಗಳನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಇಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದೆ.

ಸಂಪಾದಕೀಯ ಡೆಸ್ಕ್· 1 ನಿಮಿಷ ಓದು
ಹಂಚಿಕೊಳ್ಳಿ:

ನವದೆಹಲಿ: ಸಂಚಾರ ನಿಯಮ ಉಲ್ಲಂಘನೆಗಾಗಿ ವಿಧಿಸಲಾದ ದಂಡವನ್ನು ಬಾಕಿ ಉಳಿಸಿಕೊಂಡಿರುವವರಿಗೆ ಸುಪ್ರೀಂ ಕೋರ್ಟ್ ಸೋಮವಾರ ಬಿಗ್ ಶಾಕ್ ನೀಡಿದ್ದು, ಬಾಕಿ ಇರುವ 'ಇ-ಚಲನ್' (e- ದಂಡದ ಮೊತ್ತವನ್ನು ವಸೂಲಿ ಮಾಡಲು, ಅದನ್ನು ವಿದ್ಯುತ್ ಬಿಲ್‌ಗಳೊಂದಿಗೆ ಲಿಂಕ್ ಮಾಡುವಂತೆ ಸಲಹೆ ನೀಡಿದೆ. ಟ್ರಾಫಿಕ್ ನಿಯಮ ಉಲ್ಲಂಘನೆಗೆ ಕೇವಲ 'ಇ-ಚಲನ್' ನೀಡಿದರೆ ಸಾಕಾಗುವುದಿಲ್ಲ. ದಂಡದ ಮೊತ್ತವನ್ನು ವಸೂಲಿ ಮಾಡುವುದೇ ನಿಜವಾದ ಸವಾಲು ಆಗಿದೆ. ಹೀಗಾಗಿ ಬಾಕಿ ದಂಡ ವಸೂಲಿ ಮಾಡಲು, ಅದನ್ನು ವಿದ್ಯುತ್ ಬಿಲ್‌ಗಳೊಂದಿಗೆ ಲಿಂಕ್ ಮಾಡುವಂತಹ ಕಠಿಣ ಕ್ರಮಗಳನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಇಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದೆ. ಸಾಮಾಜಿಕ ಕಾರ್ಯಕರ್ತ ಎಸ್. ರಾಜಶೇಖರನ್ ಅವರು ರಸ್ತೆ ಸುರಕ್ಷತೆಯ ಕುರಿತು 2012ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠ ಈ ಸಲಹೆಗಳನ್ನು ನೀಡಿದೆ. ಈ ಅರ್ಜಿಯು ಸಂಚಾರ ನಿಯಮ ಉಲ್ಲಂಘನೆಗಳ ಎಲೆಕ್ಟ್ರಾನಿಕ್ ಜಾರಿ ಮತ್ತು ಪಾವತಿಯಾಗದ ಇ-ಚಲನ್ ದಂಡದ ವಸೂಲಿಗೆ ಸಂಬ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇ-ಚಲನ್‌ಗಳ ಮೂಲಕ ಸುಮಾರು 45,000 ಕೋಟಿ ರೂ.ಗಳನ್ನು ವಸೂಲಿ ಮಾಡಬೇಕಿದ್ದು, ಈ ಪೈಕಿ ಇಲ್ಲಿಯವರೆಗೆ ಸುಮಾರು 25,000 ಕೋಟಿ ರೂ.ಗಳನ್ನು ವಸೂಲಿ ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಈ ವಿಷಯಕ್ಕೆ ಸಂಬಂಧಿಸಿದಂತೆ, ವಾಸ್ತವಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಪರಿಣಾಮಕಾರಿ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ. ಚಲನ್ ಮೊತ್ತವನ್ನು ಪಾವತಿಸದಿದ್ದರೆ ಅದನ್ನು ವಿದ್ಯುತ್ ಬಾಕಿ ಬಿಲ್‌ಗೆ ಸೇರಿಸಿ. ಅವರು ವಿದ್ಯುತ್ ಬಿಲ್ ಪಾವತಿಸಲೇಬೇಕಾಗುತ್ತದೆ. ಇಲ್ಲದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ. ಸಂಚಾರ ನಿಯಮ ದಂಡದ ವಸೂಲಿಗೊಂದು ದಾರಿಯನ್ನು ಕಂಡುಕೊಳ್ಳಲೇಬೇಕು ಎಂದು ಪೀಠ ಹೇಳಿದೆ. ಇದೇ ವೇಳೆ, ರಸ್ತೆಗಳಲ್ಲಿ ತಪಾಸಣೆ ನಡೆಸಿ, ಭಾರೀ ಮೊತ್ತದ ಇ-ಚಲನ್ ಬಾಕಿ ಉಳಿಸಿಕೊಂಡಿರುವ ವಾಹನಗಳನ್ನು ನೇರವಾಗಿ ಜಪ್ತಿ ಮಾಡುವುದರ ಕುರಿತೂ ಪೀಠವು ಚರ್ಚಿಸಿತು. ಚಲನ್ ಬಾಕಿ ಇರುವ ವಾಹನ ಮಾಲೀಕರ ಡ್ರೈವಿಂಗ್ ಲೈಸೆನ್ಸ್ ಅಮಾನತುಗೊಳಿಸುವುದು. ದಂಡ ಪಾವತಿಯಾಗುವವರೆಗೂ ವಾಹನ ನೋಂದಣಿ ಪ್ರಮಾಣಪತ್ರ (RC) ನವೀಕರಣ, ಫಿಟ್‌ನೆಸ್ ಪ್ರಮಾಣಪತ್ರ ಮತ್ತು ಮಾಲಿನ್ಯ ನಿಯಂತ್ರಣ (PUC) ಪ್ರಮಾಣಪತ್ರ ನೀಡುವುದನ್ನು ನಿರ್ಬಂಧಿಸುವುದು. ನಕಲಿ ಆರ್‌ಸಿ ನೀಡುವುದು ಮತ್ತು ವಾಹನದ ಮಾಲೀಕತ್ವ ವರ್ಗಾವಣೆಯನ್ನು ತಡೆಹಿಡಿಯುವುದು. ಬಾಕಿ ಉಳಿಸಿಕೊಂಡ ವಾಹನಗಳನ್ನು ಕೇಂದ್ರ ಸರ್ಕಾರದ ‘ಪರಿವಾಹನ್’ (Parivahan) ಪೋರ್ಟಲ್‌ನಲ್ಲಿ ಕಪ್ಪುಪಟ್ಟಿಗೆ (Blacklist) ಸೇರಿಸುವಂತೆ ಸಲಹೆ ನೀಡಿತು.

ಹಂಚಿಕೊಳ್ಳಿ: