ನಾಗಾಲ್ಯಾಂಡ್‌ನಲ್ಲಿ ರಣಜಿ ಪಂದ್ಯ: 400 ರನ್ ಗಳಿಸಿದ ಮಿಜೋರಾಂನ ಚಿನ್ಮಯ್ ಸುತಾರ್
ಸೋವಿಮಾ (ನಾಗಾಲ್ಯಾಂಡ್): ಮಿಜೋರಾಂ ತಂಡದ ಬ್ಯಾಟರ್ ಚಿನ್ಮಯ್ ಸುತಾರ್ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 400 ರನ್‌ಗಳ ಸಾಧನೆ ಮಾಡಿದ್ದಾರೆ. ಆ ಮೂಲಕ ಈ ಸಾಧನೆ ಮಾಡಿದ ಭಾರತದ ಎರಡನೇ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರ...

ನಾಗಾಲ್ಯಾಂಡ್ ವಿರುದ್ಧದ ರಣಜಿ ಟ್ರೋಫಿ ಪ್ಲೇಟ್ ಗ್ರೂಪ್ ಪಂದ್ಯದಲ್ಲಿ ಮಿಜೋರಾಂ ತಂಡದ ಬ್ಯಾಟರ್ ಚಿನ್ಮಯ್ ಸುತಾರ್ ಅಜೇಯ 400 ರನ್ ಬಾರಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಭಾರತೀಯ ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. 517 ಎಸೆತಗಳನ್ನು ಎದುರಿಸಿದ ಸುತಾರ್ 46 ಬೌಂಡರಿ ಹಾಗೂ 7 ಸಿಕ್ಸರ್‌ಗಳನ್ನು ಸಿಡಿಸಿದರು. ಇವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಮಿಜೋರಾಂ ತಂಡವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ನಷ್ಟಕ್ಕೆ 581 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. 1948ರಲ್ಲಿ ಮಹಾರಾಷ್ಟ್ರದ ಭಾವುಸಾಹೇಬ್ ಬಾಬಾಸಾಹೇಬ್ ನಿಂಬಾಳ್ಕರ್ ಅವರು ಭಾರತದ ಪರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 400 ರನ್ ಗಳಿಸಿದ ಮೊದಲ ಆಟಗಾರರಾಗಿದ್ದರು.




