ಬೆಂಗಳೂರಿನಲ್ಲಿ ಹಾರ್ದಿಕ್ ಪಾಂಡ್ಯ ಭೇಟಿಯಾದ ಲಖನೌದ ಅಭಿಮಾನಿ ರವಿ ಕುಮಾರ್
ನೆಚ್ಚಿನ ಕ್ರಿಕೆಟಿಗನನ್ನು ಒಮ್ಮೆಯಾದರೂ ಭೇಟಿಯಾಗಬೇಕು ಎಂಬ ಆಸೆಗಾಗಿ ಅಭಿಮಾನಿಯೊಬ್ಬ ಬರೋಬ್ಬರಿ 2,390 ಕಿಲೋಮೀಟರ್‌ಗಳಷ್ಟು ದೂರ ಕಾಲ್ನಡಿಗೆಯಲ್ಲೇ ಪ್ರಯಾಣಿಸಿದ್ದಾರೆ. ಲಖನೌ ಮೂಲದ ರವಿ ಕುಮಾರ್ ಹಾರ್ದಿಕ್ ಪಾಂಡ್ಯ ಅವರನ...

ಲಖನೌ ಮೂಲದ ರವಿ ಕುಮಾರ್ ಎಂಬ ಕ್ರಿಕೆಟ್ ಅಭಿಮಾನಿ ತನ್ನ ನೆಚ್ಚಿನ ಆಟಗಾರ ಹಾರ್ದಿಕ್ ಪಾಂಡ್ಯ ಅವರನ್ನು ಕಾಣಲು ಬರೋಬ್ಬರಿ 2,390 ಕಿಲೋಮೀಟರ್ ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿದ್ದಾರೆ. ಲಖನೌದಿಂದ ಮುಂಬೈಗೆ ಬಂದು, ಅಲ್ಲಿಂದ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ತಲುಪಿದ ರವಿ ಕುಮಾರ್ ಅವರ ಪ್ರಯತ್ನಕ್ಕೆ ಹಾರ್ದಿಕ್ ಪಾಂಡ್ಯ ಸ್ಪಂದಿಸಿದ್ದಾರೆ. ಅಭಿಮಾನಿಯೊಂದಿಗೆ ಆತ್ಮೀಯವಾಗಿ ಮಾತನಾಡಿದ ಹಾರ್ದಿಕ್, ಆತನಿಗೆ ಅಗತ್ಯವಿರುವ ಸಹಾಯವನ್ನು ಕೇಳಿ ತಿಳಿದುಕೊಂಡಿದ್ದಾರೆ. ಅಲ್ಲದೆ, ರವಿ ಕುಮಾರ್ ಮನೆಗೆ ಮರಳಲು ರೈಲು ಟಿಕೆಟ್ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.




