ಅಮೆರಿಕದ ಫೋಲ್ಸಮ್ ನಗರದ 161 ಕಿ.ಮೀ. ಓಟದಲ್ಲಿ ಬೆಂಗಳೂರಿನ ಅಶ್ವಿನಿ ಗಣಪತಿ ಸಾಧನೆ
ಬೆಂಗಳೂರಿನ ಓಟಗಾರ್ತಿ ಅಶ್ವಿನಿ ಅವರು ಅಮೆರಿಕದಲ್ಲಿ ನಡೆದ 161 ಕಿಲೋಮೀಟರ್ (100 ಮೈಲಿ) ಕಠಿಣ ಟ್ರಯಲ್ ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ರೋಚಕ ಸಾಧನೆಯ ಸಂಪೂರ್ಣ ವಿವರ ಇಲ್...

ಅಮೆರಿಕದ ಫೋಲ್ಸಮ್ ನಗರದಲ್ಲಿ ನಡೆದ ರಿಯೊ ಡೆಲ್ ಲಾಗೊ 100 ಮೈಲಿ ಅಲ್ಟ್ರಾ ಟ್ರಯಲ್ ಓಟದಲ್ಲಿ ಬೆಂಗಳೂರಿನ 40 ವರ್ಷದ ಅಶ್ವಿನಿ ಗಣಪತಿ ಮೂರನೇ ಸ್ಥಾನ ಪಡೆದಿದ್ದಾರೆ. ಕಠಿಣ ಪರ್ವತ ಹಾದಿಯಲ್ಲಿ ನಡೆದ ಈ ಸ್ಪರ್ಧೆಯನ್ನು ಅವರು ಯಾವುದೇ ಸಹಾಯಕ ತಂಡವಿಲ್ಲದೆ ಸ್ವತಂತ್ರವಾಗಿ 26 ಗಂಟೆ 3 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದಾರೆ. ಒಟ್ಟು 350 ಸ್ಪರ್ಧಿಗಳಿದ್ದ ಈ ಓಟದಲ್ಲಿ ಅಶ್ವಿನಿ ಒಟ್ಟಾರೆ 79ನೇ ಮತ್ತು ಮಹಿಳೆಯರ ವಿಭಾಗದಲ್ಲಿ 17ನೇ ಸ್ಥಾನ ಗಳಿಸಿದ್ದಾರೆ. ಈ ವರ್ಷದ ಮೇ ತಿಂಗಳಲ್ಲಿ ಮಲೇಷ್ಯಾದಲ್ಲಿ ನಡೆದ 100 ಮೈಲಿ ಓಟದಲ್ಲೂ ಅವರು ಯಶಸ್ಸನ್ನು ಸಾಧಿಸಿದ್ದರು.




