ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ರಾಜಕೀಯ

ವಿಯೆಟ್ನಾಂ ಪ್ರವಾಸದಲ್ಲಿದ್ದಾರೆ ರಾಹುಲ್ ಗಾಂಧಿ: ಮುಂಬೈನಲ್ಲಿ ಸಂಜಯ್ ರಾವತ್ ಹೇಳಿಕೆ

ರಾಹುಲ್ ಗಾಂಧಿ ಎಲ್ಲಿದ್ದಾರೆ ಅನ್ನೋ ಅಧಿಕೃತ ಮಾಹಿತಿ ಇಲ್ಲ. ಬಿಜೆಪಿ ಈಗಾಗಲೇ ವಿದೇಶಿ ಪ್ರವಾಸದಲ್ಲಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇದಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ. ಆದರೆ ಇದೀಗ ರಿಜಿಮ್ ಚೇಂಜ್ ಹೇಳಿಕೆ ಭರದ...

ಸಂಜಯ್ ರಾವತ್ ರಿಜಿಮ್ ಚೇಂಜ್ ಹೇಳಿಕೆ ಭರದಲ್ಲಿ ರಾಹುಲ್ ಗಾಂಧಿ ವಿಯ್ನೆಟಾಂ ಟೂರ್ ಬಯಲು
ಹಂಚಿಕೊಳ್ಳಿ:

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಸ್ತುತ ವಿಯೆಟ್ನಾಂ ಪ್ರವಾಸದಲ್ಲಿದ್ದಾರೆ ಎಂದು ಶಿವಸೇನೆಯ ಉದ್ಧವ್ ಬಣದ ನಾಯಕ ಸಂಜಯ್ ರಾವತ್ ಬಹಿರಂಗಪಡಿಸಿದ್ದಾರೆ. ದೇಶದಲ್ಲಿ ಆಡಳಿತ ಬದಲಾವಣೆ ಅಥವಾ ರಿಜಿಮ್ ಚೇಂಜ್ ಆಗಲಿದೆ ಎಂದು ಹೇಳುವ ಭರದಲ್ಲಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದು, ಇದು ಕಾಂಗ್ರೆಸ್ ವಲಯದಲ್ಲಿ ಮುಜುಗರಕ್ಕೆ ಕಾರಣವಾಗಿದೆ. ರಾಹುಲ್ ಗಾಂಧಿ ಅವರು ವಿಯೆಟ್ನಾಂನಿಂದ ವಾಪಸಾದ ನಂತರ ದೇಶದಲ್ಲಿ ರಾಜಕೀಯ ಬದಲಾವಣೆಗಳು ಸಂಭವಿಸಲಿವೆ ಎಂದು ರಾವತ್ ತಿಳಿಸಿದ್ದಾರೆ. ಈ ಹಿಂದೆ ರಾಹುಲ್ ಗಾಂಧಿಯವರ ವಿದೇಶಿ ಪ್ರವಾಸದ ಕುರಿತು ಬಿಜೆಪಿ ಆರೋಪಗಳನ್ನು ಮಾಡಿದ್ದರೂ, ಮಿತ್ರ ಪಕ್ಷದ ನಾಯಕನ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಹಂಚಿಕೊಳ್ಳಿ: