ಸೋನಿಯಾ ಗಾಂಧಿ ಆತ್ಮಕಥೆ ಬೆನ್ನಲ್ಲೇ ಗಾಂಧಿ ಕುಟುಂಬದ ಕುರಿತು ವಿವಾದಾತ್ಮಕ ಪೋಸ್ಟ್ ಹಾಕಿದ ಕಂಗನಾ
ಸೋನಿಯಾ ಗಾಂಧಿ ಅವರ ಆತ್ಮಕಥೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಬಿಡುಗಡೆಯಾದ ಬೆನ್ನಲ್ಲೇ ಕಂಗನಾ ರಣಾವತ್ ಸರಣಿ ಪೋಸ್ಟ್ ಮಾಡಿದ್ದಾರೆ. ಇಂದಿರಾ, ರಾಜೀವ್, ಸಂಜಯ್ ಗಾಂಧಿ ಸಾವುಗಳ ಬಗ್ಗೆ ಕಂಗನಾ ಎತ್ತಿರುವ ಪ್ರಶ್ನೆಗಳು...

ಸೋನಿಯಾ ಗಾಂಧಿ ಅವರ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಆತ್ಮಕಥೆ ಬಿಡುಗಡೆಯಾದ ಬೆನ್ನಲ್ಲೇ, ನಟಿ ಕಂಗನಾ ರಣಾವತ್ ಗಾಂಧಿ ಕುಟುಂಬದ ಸದಸ್ಯರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇಂದಿರಾ, ಸಂಜಯ್ ಹಾಗೂ ರಾಜೀವ್ ಗಾಂಧಿ ಅವರ ನಿಗೂಢ ಸಾವುಗಳ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಶ್ನೆಗಳನ್ನು ಎತ್ತಿರುವ ಕಂಗನಾ, ಮೇನಕಾ ಗಾಂಧಿ ಅವರನ್ನು ಕುಟುಂಬದಿಂದ ಹೊರಹಾಕಿದ ಘಟನೆಯನ್ನೂ ಪ್ರಸ್ತಾಪಿಸಿದ್ದಾರೆ. ಮತ್ತೊಂದೆಡೆ, ಸೋನಿಯಾ ಗಾಂಧಿ ತಮ್ಮ ಕೃತಿಯಲ್ಲಿ ಮೇನಕಾ ಗಾಂಧಿ ಅವರೊಂದಿಗಿನ ಭಿನ್ನಾಭಿಪ್ರಾಯಗಳು ಹಾಗೂ ಅಂದಿನ ಕಹಿ ಘಟನೆಗಳನ್ನು ವಿವರವಾಗಿ ಹಂಚಿಕೊಂಡಿದ್ದಾರೆ.




