ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಸುದ್ದಿ

ಉತ್ತರ ಕೊರಿಯಾದ ಕಿಮ್ ಜಾಂಗ್-ಉನ್ ನಿಧನ ಮತ್ತು ಚೀನೀ ಸೈನಿಕರ ನಿಯೋಜನೆ ಬಗ್ಗೆ ವದಂತಿ

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಮೃತಪಟ್ಟಿದ್ದಾರೆ .ಸಹೋದರಿ ಕಿಮ್ ಯೋ-ಜಾಂಗ್ ಅಧಿಕಾರ ವಹಿಸಿಕೊಂಡಿದ್ದಾರೆ ಎಂಬ ವದಂತಿಗಳು ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಪರಿಸ್ಥಿತಿ ನಿಯಂತ್ರಿಸಲು...

ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಕೋಮಾ, ನಿಧನವೆಂದು ಘೋಷಿಸಿದ ಚೀನಾ, ಉತ್ತರ ಕೊರಿಯಾದಲ್ಲಿ 9000 ಚೀನೀ ಸೈನಿಕರ ನಿಯೋಜನೆ!
ಹಂಚಿಕೊಳ್ಳಿ:

ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್-ಉನ್ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಚೀನಾ ಡೆಮಾಕ್ರಸಿ ಪಾರ್ಟಿಯ ಅಧ್ಯಕ್ಷ ವಾಂಜುನ್ ಕ್ಸಿ ಆರೋಪಿಸಿದ್ದಾರೆ. ಕಿಮ್ ಸಾವಿನ ನಂತರ ಅವರ ಸಹೋದರಿ ಕಿಮ್ ಯೋ-ಜಾಂಗ್ ಆಡಳಿತದ ಚುಕ್ಕಾಣಿ ಹಿಡಿದಿದ್ದು, ದೇಶದಲ್ಲಿ ಪರಿಸ್ಥಿತಿ ಹತೋಟಿಯಲ್ಲಿಡಲು ಚೀನಾ 9000 ಸೈನಿಕರನ್ನು ಪಯೋಂಗ್ಯಾಂಗ್‌ಗೆ ಕಳುಹಿಸಿದೆ ಎಂದು ಹೇಳಲಾಗಿದೆ. ಆದರೆ ಈ ವಾದಗಳಿಗೆ ಯಾವುದೇ ಅಧಿಕೃತ ಪುರಾವೆಗಳಿಲ್ಲ. ಉತ್ತರ ಕೊರಿಯಾದ ಸರ್ಕಾರಿ ಮಾಧ್ಯಮಗಳು ಕಿಮ್ ಸಕ್ರಿಯವಾಗಿರುವುದನ್ನು ಬಿಂಬಿಸುವ ಚಿತ್ರಗಳನ್ನು ಬಿಡುಗಡೆ ಮಾಡಿದ್ದು, ದಕ್ಷಿಣ ಕೊರಿಯಾದ ಗುಪ್ತಚರ ಸಂಸ್ಥೆಗಳು ಕೂಡ ಈ ವದಂತಿಗಳನ್ನು ದೃಢಪಡಿಸಿಲ್ಲ.

ಹಂಚಿಕೊಳ್ಳಿ: