ಉತ್ತರ ಕೊರಿಯಾ: ಕಿಮ್ ಜಾಂಗ್ ಉನ್ ಸಾವಿನ ವದಂತಿ ತಳ್ಳಿಹಾಕಿದ ಸರ್ಕಾರ
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಬ್ರೈಮ್ ಹ್ಯಾಮ್ರೇಜ್‌ನಿಂದ ನಿಧನರಾಗಿದ್ದಾರೆ ಅನ್ನೋ ಸುದ್ದಿ ಭಾರಿ ಹಬ್ಬಿದೆ. ಇದರ ಬೆನ್ನಲ್ಲೇ ಕೆಲ ಫೋಟೋಗಳು ವೈರಲ್ ಆಗಿದೆ. ಏನಿದು ನಿಧನ ಸುದ್ದಿ ಹಾಗೂ ಲೈಫ್ ಆಫ್ ಪ್ರೂ...

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ಮೆದುಳಿನ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿತ್ತು. ಚೀನಾದ ಡೆಮಾಕ್ರಟಿಕ್ ಪಾರ್ಟಿ ಮುಖ್ಯಸ್ಥ ಕ್ಸಿ ವಂಜುನ್ ಅವರು ಕಿಮ್ ಮೃತಪಟ್ಟಿದ್ದಾರೆ ಎಂದು ಹೇಳಿಕೆ ನೀಡಿದ ಬಳಿಕ ಈ ವದಂತಿಗಳು ಜೋರಾಗಿದ್ದವು. ಇದಕ್ಕೆ ಪ್ರತಿಕ್ರಿಯೆಯಾಗಿ ಉತ್ತರ ಕೊರಿಯಾದ ಸೆಂಟ್ರಲ್ ನ್ಯೂಸ್ ಎಜೆನ್ಸಿ, ಅಕ್ಟೋಬರ್ 19 ರಂದು ಕಿಮ್ ವಸ್ತು ಪ್ರದರ್ಶನವೊಂದರಲ್ಲಿ ಪಾಲ್ಗೊಂಡಿರುವ ಫೋಟೋಗಳನ್ನು ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದೆ. ಆದಾಗ್ಯೂ, ಈ ಚಿತ್ರಗಳ ಕಾಲಾವಧಿಯ ಬಗ್ಗೆ ಈಗಲೂ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.




