ಉಡುಪಿ: ಕಲಾ ಪ್ರತಿಭೋತ್ಸವದಲ್ಲಿ ಭಾಗವಹಿಸಲು ಅರ್ಜಿ ಆಹ್ವಾನ
ಉಡುಪಿ : ಮಕ್ಕಳು ಮತ್ತು ಯುವಜನರಲ್ಲಿರುವ ಕಲಾ ಪ್ರತಿಭೆ ಗುರುತಿಸಿ ಉತ್ತೇಜನ ನೀಡಲು ಮತ್ತು ಕಲಾ ನೈಪುಣ್ಯ ವೃದ್ಧಿಗೆ ಪೆÇ್ರೀತ್ಸಾಹಿಸಲು ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಕಲಾ ಪ್ರತಿಭೋತ್ಸವ ಏರ್...

ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಿವಿಧ ವಯೋಮಾನದವರಲ್ಲಿರುವ ಕಲಾ ಪ್ರತಿಭೆಯನ್ನು ಪ್ರೋತ್ಸಾಹಿಸಲು ಕಲಾ ಪ್ರತಿಭೋತ್ಸವವನ್ನು ಆಯೋಜಿಸಿದೆ. ಬಾಲಪ್ರತಿಭೆ, ಕಿಶೋರ ಪ್ರತಿಭೆ ಹಾಗೂ ಯುವಪ್ರತಿಭೆ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಆಸಕ್ತರು ಅಕ್ಟೋಬರ್ 26ರೊಳಗೆ ಅರ್ಜಿ ಸಲ್ಲಿಸಬೇಕು. ನೃತ್ಯ, ಸಂಗೀತ, ಚಿತ್ರಕಲೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ವಯೋಮಿತಿಗಾಗಿ ಶಾಲಾ ಪ್ರಮಾಣಪತ್ರ ಅಥವಾ ಜನ್ಮ ದಿನಾಂಕದ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಆಸಕ್ತರು ಮಣಿಪಾಲದ ಅಲೆವೂರು ಗ್ರಾಮದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಗೆ ಅಂಚೆ, ಇಮೇಲ್ ಅಥವಾ ಖುದ್ದಾಗಿ ಅರ್ಜಿ ತಲುಪಿಸಬಹುದಾಗಿದೆ.




