ಮುಖ್ಯ ವಿಷಯಕ್ಕೆ ಹೋಗಿ
The Karnataka Today
8 Oct
ಸುದ್ದಿ
ಸುದ್ದಿ

ಸೇವಾದಳ ಕಾರ್ಯಕರ್ತರ ಎಡವಟ್ಟು – ತಲೆಕೆಳಗಾಗಿ ಕಾಂಗ್ರೆಸ್ ಬಾವುಟ ಹಿಡಿದು ಪಥಸಂಚಲನ..!

ಮೈಸೂರು: ಕಾಂಗ್ರೆಸ್ (Congress) ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸೇವಾದಳದ ಕಾರ್ಯಕರ್ತರು ಬಾವುಟವನ್ನು ಉಲ್ಟಾ ಹಿಡಿದು ಪಥಸಂಚಲನ ನಡೆಸಿದ ಘಟನೆ ಮೈಸೂರಿನಲ್ಲಿ (Mysuru) ನಡೆದಿದೆ. ನೂತನ...

· ಮೈಸೂರು
ಸೇವಾದಳ ಕಾರ್ಯಕರ್ತರ ಯಡವಟ್ಟು – ಕಾಂಗ್ರೆಸ್ ಬಾವುಟ ಉಲ್ಟಾ ಹಿಡಿದು ಪಥಸಂಚಲನ
ಹಂಚಿಕೊಳ್ಳಿ:

ಮೈಸೂರು: ಮೈಸೂರಿನಲ್ಲಿ (Mysuru) ನಡೆದ ಕಾಂಗ್ರೆಸ್ (Congress) ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ, ಕಾಂಗ್ರೆಸ್ ಸೇವಾದಳದ ಕಾರ್ಯಕರ್ತರು ಬಾವುಟವನ್ನು ತಲೆಕೆಳಗಾಗಿ ಹಿಡಿದು ಪಥಸಂಚಲನ ನಡೆಸಿದ ಪ್ರಸಂಗ ಜರುಗಿದೆ.

ನೂತನ ಜಿಲ್ಲಾಧ್ಯಕ್ಷ ಬೀರಿಹುಂಡಿ ಬಸವಣ್ಣ ಅವರಿಗೆ ಬಾವುಟವನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ಈ ಲೋಪ ಉಂಟಾಗಿದೆ. ನಿರ್ಗಮಿತ ಜಿಲ್ಲಾಧ್ಯಕ್ಷ ಬಿ.ಜೆ. ವಿಜಯಕುಮಾರ್ ಅವರು ಬೀರಿಹುಂಡಿ ಬಸವಣ್ಣ ಅವರಿಗೆ ಕಾಂಗ್ರೆಸ್ ಬಾವುಟ (Congress Flag) ನೀಡುವ ಮೂಲಕ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿತ್ತು. ಈ ವೇಳೆ ಬಾವುಟವನ್ನು ಜೋಡಿಸುವಾಗ ತಪ್ಪಾಗಿದೆ. ಇದನ್ನೂ ಓದಿ: ಯೋಧನ ಪಾರ್ಥಿವ ಶರೀರ ಸಾಗಿಸುತ್ತಿದ್ದ ಅಂಬುಲೆನ್ಸ್ ಅಪಘಾತ – ನಾಲ್ವರು ದುರ್ಮರಣ

ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ಕ್ರಮದಲ್ಲಿ ಇರಬೇಕಾಗಿದ್ದ ಕಾಂಗ್ರೆಸ್ ಬಾವುಟವನ್ನು ಸೇವಾದಳದ ಕಾರ್ಯಕರ್ತರು ಹಸಿರು, ಬಿಳಿ ಹಾಗೂ ಕೇಸರಿ ಬಣ್ಣದ ಕ್ರಮದಲ್ಲಿ ಉಲ್ಟಾ ಆಗಿ ಕಟ್ಟಿದ್ದರು. ನಂತರ ಈ ತಪ್ಪು ಗಮನಕ್ಕೆ ಬಂದ ತಕ್ಷಣ, ಸೇವಾದಳದ ಕಾರ್ಯಕರ್ತರು ಬಾವುಟವನ್ನು ಸರಿಪಡಿಸಿದರು. ಸಿದ್ದರಾಮಯ್ಯ ಅವರ ಉಪಸ್ಥಿತಿಯಲ್ಲೇ ಬಾವುಟವನ್ನು ಸರಿಪಡಿಸಿ, ಮತ್ತೊಮ್ಮೆ ನೂತನ ಜಿಲ್ಲಾಧ್ಯಕ್ಷರಿಗೆ ಅಧಿಕಾರವನ್ನು ಹಸ್ತಾಂತರಿಸಲಾಯಿತು. ಇದನ್ನೂ ಓದಿ: ರಾಜ್ಯದ 217 ತಾಲೂಕುಗಳಲ್ಲಿ ಬರ ತಾಂಡವ – ವಿವಿಧ ಜಿಲ್ಲೆಗಳಲ್ಲಿ ಕೇಂದ್ರದ ತಂಡದಿಂದ ಬರ ಅಧ್ಯಯನ

ಹಂಚಿಕೊಳ್ಳಿ: