ಮುಖ್ಯ ವಿಷಯಕ್ಕೆ ಹೋಗಿ
The Karnataka Today
8 Oct
ಸುದ್ದಿ
ಸುದ್ದಿ

ಸಾಗರ | ಬ್ರೇಕ್‌ ಫೇಲ್‌ ಆಗಿ ಮನೆ ಮೇಲೆ ಬಿದ್ದ ಪ್ರವಾಸಿ ಬಸ್ – 8 ಮಹಿಳೆಯರಿಗೆ ಗಾಯ

ಶಿವಮೊಗ್ಗ: ಪ್ರವಾಸಕ್ಕೆ ಬಂದಿದ್ದ ಬಸ್ ಬ್ರೇಕ್‌ ಫೇಲ್‌ ಆಗಿ ಮನೆಯೊಂದರ ಮೇಲೆ ಬಿದ್ದ ಘಟನೆ ಸಾಗರ (Sagar) ತಾಲೂಕಿನ ಹೊಸಕೊಪ್ಪ ಸಮೀಪದ ಹಲಕೊಟ್ಟಿಗೆ ಕ್ರಾಸ್ ಬಳಿ ನಡೆದಿದೆ. ಘಟನೆಯಲ್ಲಿ 7-8 ಜನರಿಗೆ ಸಣ್ಣಪುಟ್ಟ ಗಾಯಗಳಾ...

· ಶಿವಮೊಗ್ಗ
ಸಾಗರ | ಬ್ರೇಕ್‌ ಫೇಲ್‌ ಆಗಿ ಮನೆ ಮೇಲೆ ಬಿದ್ದ ಪ್ರವಾಸಿ ಬಸ್ – 8 ಮಹಿಳೆಯರಿಗೆ ಗಾಯ
ಹಂಚಿಕೊಳ್ಳಿ:

ಶಿವಮೊಗ್ಗ: ಪ್ರವಾಸಕ್ಕೆ ಬಂದಿದ್ದ ಬಸ್ ಬ್ರೇಕ್‌ ಫೇಲ್‌ ಆಗಿ ಮನೆಯೊಂದರ ಮೇಲೆ ಬಿದ್ದ ಘಟನೆ ಸಾಗರ (Sagar) ತಾಲೂಕಿನ ಹೊಸಕೊಪ್ಪ ಸಮೀಪದ ಹಲಕೊಟ್ಟಿಗೆ ಕ್ರಾಸ್ ಬಳಿ ನಡೆದಿದೆ.

ಘಟನೆಯಲ್ಲಿ 7-8 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಲಾರಿ, KSRTC ಬಸ್‌ ನಡುವೆ ಮುಖಾಮುಖಿ ಡಿಕ್ಕಿ – ಮಗು ಸಾವು, 10 ಮಂದಿಗೆ ಗಾಯ

ದಾವಣಗೆರೆಯ (Davanagere) ನಿಟ್ಟುವಳ್ಳಿಯ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ 24 ಜನ ಮಹಿಳಾ ಪ್ರವಾಸಿಗರು ಕೊಲ್ಲೂರು- ಸಿಗಂದೂರು- ಬಳೆ ಪದ್ಮಾವತಿ ದೇವಸ್ಥಾನಕ್ಕೆ ಬಂದಿದ್ದರು. ಬಳೆ ಪದ್ಮಾವತಿ ದೇವಾಲಯಕ್ಕೆ ತೆರಳುವ ಮಾರ್ಗದ ಹಲಕೊಟ್ಟಿಗೆ ಕ್ರಾಸ್ ಬಳಿ ತೆರಳುತ್ತಿದ್ದಾಗ ಬಸ್‌ನ ಬ್ರೇಕ್ ಫೇಲ್ ಆಗಿ ಮನೆ ಮೇಲೆ ಪಲ್ಟಿಯಾಗಿದೆ.

ಮನೆ ಮೇಲೆ ಬಸ್ ಪಲ್ಟಿಯಾದ ಪರಿಣಾಮ ಮನೆಗೆ ಹಾನಿಯಾಗಿದೆ. ಗಾಯಾಳುಗಳಿಗೆ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಹಂಚಿಕೊಳ್ಳಿ: