ಮುಖ್ಯ ವಿಷಯಕ್ಕೆ ಹೋಗಿ
The Karnataka Today
8 Oct
ಸುದ್ದಿ
ಸುದ್ದಿ

ರಾಜ್ಯದ ಜನರಿಗೆ ಬಿಗ್ ಶಾಕ್- ಹಾಲಿನ ದರ ಲೀಟರ್‌ಗೆ 8 ರೂ. ಹೆಚ್ಚಳಕ್ಕೆ ಸಂಪುಟ ಅಸ್ತು!

ಬೆಂಗಳೂರು: ದಸರಾಗೂ ಮುನ್ನ ರಾಜ್ಯದ ಜನತೆಗೆ ಮತ್ತೆ ಹಾಲಿನ ದರ ಏರಿಕೆಯ ಶಾಕ್ ಎದುರಾಗಿದೆ. ಪ್ರತಿ ಲೀಟರ್ ಹಾಲಿನ ದರ... The post ರಾಜ್ಯದ ಜನತೆಗೆ ಮತ್ತೊಂದು ಶಾಕ್- ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತ...

· ಉಡುಪಿ
ರಾಜ್ಯದ ಜನತೆಗೆ ಮತ್ತೊಂದು ಶಾಕ್- ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!
ಹಂಚಿಕೊಳ್ಳಿ:

ಬೆಂಗಳೂರು: ದಸರಾಗೂ ಮುನ್ನ ರಾಜ್ಯದ ಜನತೆಗೆ ಮತ್ತೆ ಹಾಲಿನ ದರ ಏರಿಕೆಯ ಶಾಕ್ ಎದುರಾಗಿದೆ. ಪ್ರತಿ ಲೀಟರ್ ಹಾಲಿನ ದರ 10 ರೂಪಾಯಿ ಹೆಚ್ಚಿಸಬೇಕೆಂದು ಹಾಲು ಮಾರಾಟ ಒಕ್ಕೂಟಗಳು ಮನವಿ ಮಾಡಿತ್ತು. ಆದರೆ ಸರ್ಕಾರ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂಪಾಯಿ ಹೆಚ್ಚಿಸಲು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಒಲವು ವ್ಯಕ್ತಪಡಿಸಿದ್ದು, ಸಚಿವ ಸಂಪುಟ ಸಭೆಯಲ್ಲೂ ದರ ಏರಿಕೆಗೆ ಸಮ್ಮತಿ ದೊರೆತಿದೆ ಎಂದು ತಿಳಿದುಬಂದಿದೆ.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸದ್ಯ ಹಾಲಿನ ದರ ಏರಿಕೆ ಕುರಿತು ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿಗಳ ವಿವೇಚನೆಗೆ ಬಿಡಲಾಗಿದೆ ಎನ್ನಲಾಗಿದೆ. ಇನ್ನು ಅಕ್ಟೋಬರ್ 27ರ ಬಳಿಕ ಹಾಲಿನ ದರ ಏರಿಕೆಯಾಗುವ ಸಾಧ್ಯತೆ ಇದೆ.

ಹಂಚಿಕೊಳ್ಳಿ: