ಮುಖ್ಯ ವಿಷಯಕ್ಕೆ ಹೋಗಿ
The Karnataka Today
16 Oct
ಸುದ್ದಿ
ಸುದ್ದಿ

ಪೇಶಾವರ: ಶಾಲಾ ಕಟ್ಟಡದ ಛಾವಣಿ ಕುಸಿತ, 27 ವಿದ್ಯಾರ್ಥಿಗಳು ಸೇರಿ 28 ಮಂದಿ ಸಾವು

ಪಾಕಿಸ್ತಾನದ ಪೇಷಾವರದಲ್ಲಿ ಶಾಲೆ ಛಾವಣಿ ಕುಸಿದು ದುರಂತ ಘಟನೆ ಸಂಭವಿಸಿದ್ದು, 27 ವಿದ್ಯಾರ್ಥಿಗಳು ಸೇರಿ ಒಟ್ಟು 28 ಜನರು ದುರ್ಮರಣಕ್ಕೀಡಾದ ಬಗ್ಗೆ ವರದಿಯಾಗಿದೆ. ಘಟನೆ ಹೇಗಾಯ್ತು? ಕಾರಣವೇನು ವಿವರಗಳಿಗಾಗಿ ಪೂರ್ತಿ ಓದಿ...

Breaking: ಪಾಕಿಸ್ತಾನದಲ್ಲಿ ಭೀಕರ ದುರಂತ: 27 ಶಾಲಾ ವಿದ್ಯಾರ್ಥಿಗಳು ದುರ್ಮರಣ! ಆಗಿದ್ದೇನು?
ಹಂಚಿಕೊಳ್ಳಿ:

ಪಾಕಿಸ್ತಾನದ ಪೇಶಾವರದಲ್ಲಿರುವ ಅಲ್ ಖೈರ್ ಶಾಲೆಯ ಕಟ್ಟಡದ ಛಾವಣಿ ಕುಸಿದು ಬಿದ್ದ ಪರಿಣಾಮ 28 ಮಂದಿ ಮೃತಪಟ್ಟಿದ್ದಾರೆ. ಮೃತರ ಪೈಕಿ 27 ವಿದ್ಯಾರ್ಥಿಗಳು ಹಾಗೂ ಓರ್ವ ಶಿಕ್ಷಕಿ ಸೇರಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ತರಗತಿಯಲ್ಲಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯ ಮುಂದುವರಿದಿದೆ. ಗಾಯಗೊಂಡವರ ಪೈಕಿ ಐವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಲೇಡಿ ರೀಡಿಂಗ್ ಆಸ್ಪತ್ರೆಯ ವಕ್ತಾರ ಮುಹಮ್ಮದ್ ಅಸಿಮ್ ತಿಳಿಸಿದ್ದಾರೆ. https://t.co/7RS7EX9trp

ಹಂಚಿಕೊಳ್ಳಿ: