ವಿಜಯ್ ಮಲ್ಯ: 'ನಾನು ರಾಜನಂತೆ ಬದುಕಿದ್ದೇ ದೊಡ್ಡ ಅಪರಾಧವಾಯಿತು
ನಾನು ಕಳ್ಳನೇ? ನನ್ನ ಸ್ವಂತ ಹಣದಲ್ಲಿ ರಾಜನಂತೆ ಬದುಕಿದ್ದೇ ನನ್ನ ತಪ್ಪಾಯಿತೇ?" ಎಂದು ಕಿಂಗ್ಫಿಷರ್ ಸಂಸ್ಥೆಯ ಮಾಜಿ ಮುಖ್ಯಸ್ಥ ವಿಜಯ್ ಮಲ್ಯ ಸಾಮಾಜಿಕ ಜಾಲತಾಣ 'ಎಕ್ಸ್' (X) ನಲ್ಲಿ ಬರೆದುಕೊಂಡಿದ್ದಾರೆ.

ಯುನೈಟೆಡ್ ಬ್ರೂವರೀಸ್ ಲಿಮಿಟೆಡ್ನ ಷೇರುಗಳ ಮೇಲಿನ ಬ್ಯಾಂಕ್ ಒಕ್ಕೂಟದ ಹಕ್ಕನ್ನು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ. ಕಿಂಗ್ಫಿಷರ್ ಏರ್ಲೈನ್ಸ್ನ ಮೂಲ ಸಾಲಕ್ಕಿಂತ ಹೆಚ್ಚಿನ ಮೊತ್ತವನ್ನು ಈಗಾಗಲೇ ವಸೂಲಿ ಮಾಡಲಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದ್ದು, ಡಿಯಾಜಿಯೊ ಹೋಲ್ಡಿಂಗ್ಸ್ ಸಂಸ್ಥೆಯ ಹಕ್ಕನ್ನು ಎತ್ತಿಹಿಡಿದಿದೆ. ಈ ತೀರ್ಪಿನ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ವಿಜಯ್ ಮಲ್ಯ, ತಾನು ರಾಜನಂತೆ ಬದುಕಿದ್ದೇ ದೊಡ್ಡ ಅಪರಾಧವಾಗಿ ಪರಿಣಮಿಸಿದೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಸಿದ್ಧಾರ್ಥ್ ಮಲ್ಯ ಅವರು ಸಾಲ ಒಪ್ಪಂದಕ್ಕೆ ಸಹಿ ಹಾಕದಿರುವ ಅಂಶವನ್ನೂ ನ್ಯಾಯಾಲಯ ಪರಿಗಣಿಸಿದೆ.




