ಮುಖ್ಯ ವಿಷಯಕ್ಕೆ ಹೋಗಿ
The Karnataka Today
13 Oct
ಸುದ್ದಿ
ಸುದ್ದಿ

ಪಂಜಾಬ್: ಫೇಸ್‌ಬುಕ್ ಲೈವ್‌ನಲ್ಲಿದ್ದಾಗಲೇ ಡ್ರಗ್ಸ್ ವಿರೋಧಿ ಹೋರಾಟಗಾರ ಪರ್ಮಿಂದರ್ ಸಿಂಗ್ ಜೊಟ್ಟಾ ಹತ್ಯೆ

ಪಂಜಾಬ್‌ನ ಮಾನ್ಸಾದಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಹೋರಾಡುತ್ತಿದ್ದ ಪ್ರಮುಖ ಕಾರ್ಯಕರ್ತ ಪರ್ಮಿಂದರ್ ಸಿಂಗ್ ಜೊಟ್ಟಾ ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಫೇಸ್‌ಬುಕ್ ಲೈವ್ ಮಾಡುತ್ತಿದ್ದಾಗಲೇ ಈ ಆಘ...

ಪಂಜಾಬ್: ಫೇಸ್‌ಬುಕ್ ಲೈವ್‌ನಲ್ಲಿದ್ದಾಗಲೇ ಗುಂಡೇಟಿಗೆ ಬಲಿ! ಯಾರು ಈ ಪರ್ಮಿಂದರ್ ಸಿಂಗ್? ಕೊಂದಿದ್ದೇಕೆ?
ಹಂಚಿಕೊಳ್ಳಿ:

ಪಂಜಾಬ್‌ನಲ್ಲಿ ಮಾದಕ ದ್ರವ್ಯಗಳ ಬಳಕೆ ಮತ್ತು ಮಾರಾಟದ ವಿರುದ್ಧ ಸುದೀರ್ಘ ಅವಧಿಯಿಂದ ಹೋರಾಟದಲ್ಲಿ ತೊಡಗಿದ್ದ ಮಾನ್ಸಾದ ಪ್ರಮುಖ ಹೋರಾಟಗಾರ ಪರ್ಮಿಂದರ್ ಸಿಂಗ್ ಜೊಟ್ಟಾ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದ್ದು, ಈ ಪ್ರಕರಣ ರಾಜ್ಯವನ್ನು ಬೆಚ್ಚಿಬೀಳಿಸಿದೆ.

ಪರ್ಮಿಂದರ್ ಸಿಂಗ್ ಅವರ ಜೊತೆಗಿದ್ದವರಿಗೂ ಗುಂಡೇಟು ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಯಾರು ಪರ್ಮಿಂದರ್ ಸಿಂಗ್ ಜೊಟ್ಟಾ?

ಪಂಜಾಬ್‌ನಲ್ಲಿ ಡ್ರಗ್ಸ್ ಸೇವನೆ ಹಾಗೂ ಮಾರಾಟ ಮಿತಿ ಮೀರಿದ್ದು, ಇದರ ವಿರುದ್ಧ ಪರ್ಮಿಂದರ್ ಸಿಂಗ್ ಹಲವು ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಿದ್ದರು. ಮಾದಕ ದ್ರವ್ಯಗಳ ದುರ್ಬಳಕೆ ಹಾಗೂ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮೆಡಿಕಲ್ ಶಾಪ್‌ಗಳ ವಿರುದ್ಧ ಧ್ವನಿ ಎತ್ತಿದ್ದರಿಂದ ಅವರು ಡ್ರಗ್ಸ್ ಮಾಫಿಯಾಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಇಂದು ಮಂಗಳವಾರ (ಅಕ್ಟೋಬರ್ 13) ಮುಂಜಾನೆಯೇ ಔಷಧ ಅಂಗಡಿಯಿಂದ ಮಾದಕ ದ್ರವ್ಯ ಖರೀದಿಸುತ್ತಿದ್ದ ವ್ಯಕ್ತಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ.

ಫೇಸ್‌ಬುಕ್ ಲೈವ್ ಮಾಡುವಾಗಲೇ ಗುಂಡೇಟು!

ಮಾದಕ ದ್ರವ್ಯಗಳ ಮಾರಾಟ ಹಾಗೂ ಸೇವನೆ ವಿರುದ್ಧ ಸಮರ ಸಾರಿದ್ದ ಪರ್ಮಿಂದರ್ ಸಿಂಗ್ ಜೋಟ್ಟ ಅವರು ಇಂದು ಫಾರ್ಮಸಿಗೆ ತೆರಳಿದಾಗ ಫೇಸ್‌ಬುಕ್ ಲೈವ್‌ನಲ್ಲಿದ್ದರು. ಈ ಸಂದರ್ಭದಲ್ಲಿಯೇ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಂದಿದ್ದಾರೆ ಎಂದು ವರದಿಯಾಗಿದೆ.

ಪರ್ಮಿಂದರ್ ಸಿಂಗ್ ಸಾವಿಗೆ ನಾಯಕರು ಕಂಬನಿ

ಪರ್ಮಿಂದರ್ ಸಿಂಗ್ ಅವರ ನಿಧನಕ್ಕೆ ಕಾಂಗ್ರೆಸ್ ನಾಯಕ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಸಂತಾಪ ಸೂಚಿಸಿದ್ದಾರೆ. ಹಗಲಲ್ಲೇ ಪರ್ಮಿಂದರ್ ಅವರ ಹತ್ಯೆ ನಡೆದಿದೆ. ಪಂಜಾಬ್‌ನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಡ್ರಗ್ಸ್ ಕ್ರಿಮಿನಲ್‌ಗಳ ಹಾವಳಿ ಹೆಚ್ಚಾಗಿದೆ. ಪರ್ಮಿಂದರ್ ಡ್ರಗ್ಸ್ ವಿರುದ್ಧ ಹೋರಾಟ ನಡೆಸಿದ್ದರು, ಆದರೆ ಅವರ ಹೋರಾಟಕ್ಕೆ ಪಂಜಾಬ್ ಸರ್ಕಾರ ಯಾವತ್ತೂ ಬೆಂಬಲ ನೀಡಿರಲಿಲ್ಲ. ಇಂದು ಪರ್ಮಿಂದರ್ ಹತ್ಯೆಯಾಗಿದೆ. ಇದು ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷದ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸಿದೆ ಎಂದು ಎಕ್ಸ್‌ ಪೋಸ್ಟ್ ಮಾಡಿದ್ದಾರೆ.

ಹಂಚಿಕೊಳ್ಳಿ: