ನಿಪ್ಪಾಣಿ: ಹೆದ್ದಾರಿಯಲ್ಲಿ ಲಾರಿ ಡಿಕ್ಕಿ, ಪೊಲೀಸ್ ಮುಖ್ಯಪೇದೆ ಮತ್ತು ಮಗಳು ಸಾವು
ಚಿಕ್ಕೋಡಿ: ಇಲ್ಲಿ ನಡೆಯುತ್ತಿದ್ದ ರೈತ ಹೋರಾಟ ಮುಕ್ತಾಯವಾಗಿ ಸಂಚಾರ ಆರಂಭ ಆಗ್ತಿದ್ದಂತೆ ದುರಂತವೊಂದು ಸಂಭವಿಸಿದೆ. ಸ್ಪೀಡ್ ಬ್ರೇಕರ್ ಬಳಿ ಬೈಕ್ ಸ್ಲೋ ಮಾಡ್ತಿದ್ದಂತೆ ಹಿಂದಿನಿಂದ ಬಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ತಂ...

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಹೊರವಲಯದ ಸ್ತವನಿಧಿ ಘಾಟ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಂದೆ ಮತ್ತು ಮಗಳು ಮೃತಪಟ್ಟಿದ್ದಾರೆ. ನಿಪ್ಪಾಣಿ ಟೌನ್ ಪೊಲೀಸ್ ಠಾಣೆಯ ಮುಖ್ಯಪೇದೆಯಾಗಿದ್ದ ಪುಂಡಲೀಕ ಹಟ್ಟಿ ಮತ್ತು ಅವರ ಮಗಳು ನಿಖಿತಾ ಬೈಕ್‌ನಲ್ಲಿ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಹೆದ್ದಾರಿಯ ಸ್ಪೀಡ್ ಬ್ರೇಕರ್ ಬಳಿ ಬೈಕ್ ವೇಗವನ್ನು ಕಡಿಮೆ ಮಾಡಿದಾಗ, ಹಿಂದಿನಿಂದ ಬಂದ ಲಾರಿ ಬೈಕ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೈಕ್‌ನಿಂದ ಕೆಳಗೆ ಬಿದ್ದ ಇಬ್ಬರ ಮೇಲೆಯೂ ಲಾರಿ ಹರಿದು ಹೋಗಿದ್ದು, ಸ್ಥಳದಲ್ಲೇ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ನಿಪ್ಪಾಣಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.




