ಮೇವು ಹಾಕುವ ವಿಚಾರದಲ್ಲಿ ಜಗಳ: ಪತ್ನಿಯನ್ನು ಕೊಂದ ಪತಿ!
ಚಿಕ್ಕೋಡಿ: ಹಸುಗಳಿಗೆ ಮೇವು ಹಾಕುವ ವಿಚಾರಕ್ಕೆ ಪತಿ-ಪತ್ನಿ ನಡುವೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ, ಪತಿಯೇ ಪತ್ನಿಯನ್ನು ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮಾಡಲಗಿ ಗ್...


ಚಿಕ್ಕೋಡಿ: ಹಸುಗಳಿಗೆ ಮೇವು ಹಾಕುವ ವಿಚಾರಕ್ಕೆ ಪತಿ-ಪತ್ನಿ ನಡುವೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ, ಪತಿಯೇ ಪತ್ನಿಯನ್ನು ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮಾಡಲಗಿ ಗ್ರಾಮದಲ್ಲಿ ನಡೆದಿದೆ.
ಮಾಡಲಗಿ ಗ್ರಾಮದ ಕಲ್ಲವ್ವ ಮರಡಿ (55) ಕೊಲೆಯಾದ ದುರ್ದೈವಿ ಮಹಿಳೆ. ಕಲ್ಲವ್ವ ಹಾಗೂ ಅವರ ಪತಿ ಸದಾಶಿವ ಮರಡಿ (67) ನಡುವೆ ಹಲವು ವರ್ಷಗಳಿಂದ ನಿರಂತರವಾಗಿ ಜಗಳ ನಡೆಯುತ್ತಿತ್ತು.
ಹಸುಗಳಿಗೆ ಮೇವು ಹಾಕುವ ವಿಚಾರವಾಗಿ ಇಬ್ಬರ ನಡುವೆ ಮತ್ತೆ ಗಲಾಟೆ ಆರಂಭವಾಗಿತ್ತು. ಬಳಿಕ ಕಲ್ಲವ್ವ ಅವರು ಮೇವು ತರಲು ಕಬ್ಬಿನ ಗದ್ದೆಗೆ ತೆರಳಿದ್ದರು. ಈ ವೇಳೆ ಪತಿ ಸದಾಶಿವ ಮರಡಿ ಅವರ ಹಿಂದೆಯೇ ಕಬ್ಬಿನ ಗದ್ದೆಗೆ ತೆರಳಿ ಕುಡಗೋಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನೆಯ ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ಪತಿ ಸದಾಶಿವ ಮರಡಿಯನ್ನು ಬಂಧಿಸಿದ್ದಾರೆ. ಈ ಕುರಿತು ರಾಯಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




