ಮೈಸೂರು | ನಾಲ್ಕೇ ದಿನಕ್ಕೆ ಮುರಿದು ಬಿದ್ದ ದಸರಾ ದೀಪಾಲಂಕಾರ ಕಟೌಟ್
ಮೈಸೂರು: ನಗರದ ಗನ್ ಹೌಸ್ ವೃತ್ತದಲ್ಲಿ ಕಟ್ಟಲಾಗಿದ್ದ ದಸರಾ ದೀಪಾಲಂಕಾರದ ಕಟೌಟ್ (Dasara Lightings Cutout) ಏಕಾಏಕಿ ಮುರಿದು ಬಿದ್ದಿದೆ. ಟಿಟಿ ವಾಹನದ ಮೇಲೆ ವಿದ್ಯುತ್ ದೀಪಾಲಂಕಾರದ (Dasara Lightings) ಕಟೌಟ್ ಬಿ...

ಮೈಸೂರು: ನಗರದ ಗನ್ ಹೌಸ್ ವೃತ್ತದಲ್ಲಿ ಅಳವಡಿಸಲಾಗಿದ್ದ ದಸರಾ ದೀಪಾಲಂಕಾರದ ಕಟೌಟ್ (Dasara Lightings Cutout) ಹಠಾತ್ತಾಗಿ ಕುಸಿದು ಬಿದ್ದಿದೆ.
ಟಿಟಿ ವಾಹನದ ಮೇಲೆ ಈ ವಿದ್ಯುತ್ ದೀಪಾಲಂಕಾರದ (Dasara Lightings) ಕಟೌಟ್ ಬಿದ್ದಿದ್ದು, ವಾಹನ ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ಹಾಗೂ ಗುತ್ತಿಗೆ ಪಡೆದ ಮೋಹನ್ ಎಂಬುವವರ ನಿರ್ಲಕ್ಷ್ಯದಿಂದ ಈ ಕಟೌಟ್ ಮುರಿದು ಬಿದ್ದಿದೆ ಎಂದು ಆರೋಪಿಸಲಾಗಿದೆ. ಬೃಹತ್ ಲೈಟ್ ಕಟೌಟ್ ಅಳವಡಿಸಲು ಕೇವಲ ಅರ್ಧ ಅಡಿ ಗುಂಡಿ ತೋಡಿ ಕಂಬ ನೆಟ್ಟಿದ್ದೇ ಕಟೌಟ್ ಬೀಳಲು ಕಾರಣವಾಗಿದೆ. ಇದನ್ನೂ ಓದಿ: ಟ್ರೆಕ್ಕಿಂಗ್ ವೇಳೆ ಈಜಲು ಹೋದ ಟೆಕ್ಕಿ ನಾಪತ್ತೆ
ಕಟೌಟ್ ಅಳವಡಿಸಿದ ಕೇವಲ ನಾಲ್ಕೇ ದಿನಗಳಲ್ಲಿ ಈ ಘಟನೆ ನಡೆದಿದೆ. ವಿದ್ಯುತ್ ದೀಪಾಲಂಕಾರದ ಕಟೌಟ್ ನೆಲಕ್ಕೆ ಅಪ್ಪಳಿಸಿದೆ. ಇದನ್ನೂ ಓದಿ: ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ




