ಮುಖ್ಯ ವಿಷಯಕ್ಕೆ ಹೋಗಿ
The Karnataka Today
8 Oct
ಸುದ್ದಿ
ಸುದ್ದಿ

ಮೈಸೂರು ದಸರಾ; ಧನಂಜಯನಿಗೆ ಚಿನ್ನದಂಬಾರಿ ಹೊರುವ ಹೊಣೆ?

ಮೈಸೂರು: ಈ ಬಾರಿ ವಿಶ್ವವಿಖ್ಯಾತ ದಸರಾ (Mysuru Dasara) ಚಿನ್ನದಂಬಾರಿ ಹೊರುವ ಆನೆ ಬಹುತೇಕ ಫಿಕ್ಸ್ ಆಗಿದೆ. ಅಭಿಮನ್ಯು ನಿವೃತ್ತಿ ಬಳಿಕ ಧನಂಜಯ (Dhananjaya Elephant) ಆನೆಯತ್ತ ಅರಣ್ಯ ಇಲಾಖೆ ಚಿತ್ತ ನೆಟ್ಟಿದೆ. ದ...

· ಮೈಸೂರು
ಮೈಸೂರು ದಸರಾ; ಧನಂಜಯನಿಗೆ ಚಿನ್ನದಂಬಾರಿ ಹೊರುವ ಹೊಣೆ?
ಹಂಚಿಕೊಳ್ಳಿ:

ಮೈಸೂರು: ಈ ಬಾರಿ ವಿಶ್ವವಿಖ್ಯಾತ ದಸರಾ (Mysuru Dasara) ಚಿನ್ನದಂಬಾರಿ ಹೊರುವ ಆನೆ ಬಹುತೇಕ ಫಿಕ್ಸ್ ಆಗಿದೆ. ಅಭಿಮನ್ಯು ನಿವೃತ್ತಿ ಬಳಿಕ ಧನಂಜಯ (Dhananjaya Elephant) ಆನೆಯತ್ತ ಅರಣ್ಯ ಇಲಾಖೆ ಚಿತ್ತ ನೆಟ್ಟಿದೆ.

ದಸರಾ ಜಂಬೂಸವಾರಿಯಲ್ಲಿ 750 ಕೆಜಿ ತೂಕದ ಚಿನ್ನದಂಬಾರಿ (Dasara Jamboo Savari) ಹೊರುವ ಆನೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಮಹತ್ವದ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಮಹೇಂದ್ರ, ಪ್ರಶಾಂತ, ಏಕಲವ್ಯ ಕಾಂಪಿಟೇಶನ್ ನಡುವೆ ಧನಂಜಯ ಮುನ್ನಡೆಗೆ ಬಂದಿದೆ. ಮೋಸ್ಟ್ ಲೈಕ್ಲಿ ಧನಂಜಯ ಎಂದ ಯತೀಂದ್ರ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ಸುಳಿವು ನೀಡಿದ್ದಾರೆ.

ಮುಂದಿನ ಅಂಬಾರಿ ಆನೆ ಧನಂಜಯನಾ ಎಂಬ ಕುತೂಹಲ ಮೈಸೂರಿನ ಜನರಲ್ಲಿ ಹೆಚ್ಚಿದೆ. ತಾಲೀಮಿನಲ್ಲಿ ಹಲವು ಹಂತಗಳ ಪರಿಶೀಲನೆ ಬಳಿಕ ಧನಂಜಯ ಹೆಸರು ಮುನ್ನೆಲೆಗೆ ಬಂದಿದೆ.

ಅಂಬಾರಿ ಹೊರುವ ಆನೆ ಆಯ್ಕೆ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಧನಂಜಯನ ಸಾಮರ್ಥ್ಯ, ಗಾಂಭೀರ್ಯ ಮತ್ತು ತಾಲೀಮಿನ ಮೇಲೆ ಗಮನ ಕೇಂದ್ರೀಕರಿಸಲಾಗಿದೆ. ಅಂತಿಮವಾಗಿ ಅರಣ್ಯ ಇಲಾಖೆ ಅಧಿಕೃತ ನಿರ್ಧಾರ ಪ್ರಕಟಿಸಬೇಕಿದೆ.

ಅಭಿಮನ್ಯು ಬಳಿಕ ಹೊಸ ಅಂಬಾರಿ ಆನೆಗಾಗಿ ಗಜಪಡೆಗೆ ವಿಶೇಷ ತಾಲೀಮು ನಡೆಸಲಾಗುತ್ತಿದೆ. ಮೈಸೂರು ದಸರಾ ಜಂಬೂಸವಾರಿಯಲ್ಲಿ ಧನಂಜಯನಿಗೆ ಐತಿಹಾಸಿಕ ಅವಕಾಶ ಸಿಗುತ್ತಾ ಎಂಬ ಪ್ರಶ್ನೆ ಮೂಡಿದೆ.

ಹಂಚಿಕೊಳ್ಳಿ: