ಮುಖ್ಯ ವಿಷಯಕ್ಕೆ ಹೋಗಿ
The Karnataka Today
8 Oct
ಸುದ್ದಿ
ಸುದ್ದಿ

ಕೆಪಿಎಸ್‌ಸಿ ಹಗರಣ: ಇಡಿ ಬಲೆಗೆ ಬಿದ್ದ ಕೆಪಿಎಸ್‌ಸಿ ಮಾಜಿ ಸದಸ್ಯೆ ಗೀತಾ!

ಬೆಂಗಳೂರು: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಹಗರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಹಾಗೂ ಮಾಜಿ ಸದಸ್ಯೆ ಗೀತಾಗೆ ಇಡಿ ಬಿಗ್ ಶಾಕ್ ಕೊಟ್ಟಿದೆ. ಪ್ರಕರಣ ಸಂಬಂಧ...

· ಬೆಂಗಳೂರು ನಗರ
ಕೆಪಿಎಸ್‌ಸಿ ಹಗರಣದಲ್ಲಿ ಇಡಿ ಭರ್ಜರಿ ಬೇಟೆ; ಕೆಪಿಎಸ್‌ಸಿ ಮಾಜಿ ಸದಸ್ಯೆ ಗೀತಾ ಅರೆಸ್ಟ್
ಹಂಚಿಕೊಳ್ಳಿ:

ಬೆಂಗಳೂರು: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಹಗರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಹಾಗೂ ಮಾಜಿ ಸದಸ್ಯೆ ಗೀತಾಗೆ ಇಡಿ ಬಿಗ್ ಶಾಕ್ ಕೊಟ್ಟಿದೆ. ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಇಬ್ಬರನ್ನೂ ಬಂಧಿಸಿದ್ದಾರೆ.

ಶಿವಶಂಕರಪ್ಪ ಬೆಂಗಳೂರು ನಿವಾಸದ ಮೇಲೆ ರೇಡ್ ಮಾಡಿದ್ದ ಇ.ಡಿ. ಬಂಧನ ಮಾಡಿದೆ. ಶಿವಶಂಕರಪ್ಪ ಸಂಬಂಧಿ ಸುಗುರೇಶ್ ಜಾಕಾ ತಪ್ಪೊಪ್ಪಿಗೆ ಮತ್ತು ಪರೀಕ್ಷಾ ನಿಯಂತ್ರಕ ಗ್ಯಾನೇಂದ್ರ ಹೇಳಿಕೆ ಆಧರಿಸಿ ಶಿವಶಂಕರಪ್ಪ ಸಾಹುಕಾರ್‌ನನ್ನು ಇಡಿ ಬೇಟೆಯಾಡಿದೆ. ಸುಗುರೇಶ್ ಜಾಕಾ ನೇಮಕಾತಿ ಬಗ್ಗೆ ಗ್ಯಾನೇಂದ್ರ ಬಳಿ ಶಿವಶಂಕರಪ್ಪ ಮಾತುಕತೆ ನಡೆಸಿದ್ದರು. ಹೀಗಾಗಿ ಶಿವಶಂಕರಪ್ಪಕ್ಕೆ ಅಕ್ರಮದ ಬಗ್ಗೆ ಮೊದಲೇ ಗೊತ್ತಿತ್ತು ಅನ್ನೋದು ಇ.ಡಿ ವಾದವಾಗಿದೆ.

> ಜ.8ರಂದು ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆ
> ಜ.7ರ ರಾತ್ರಿ 8:30ಕ್ಕೆ ಗ್ಯಾನೇಂದ್ರ ಕುಮಾರ್‌ಗೆ ಫೋನ್
> ಜ. 8ರಂದು ಕರೆ ಮಾಡಿ ಶಿವಶಂಕರಪ್ಪ, ಗ್ಯಾನೇಂದ್ರ ಮಾತುಕತೆ
> ಎರಡು ಬಾರಿ ವಾಟ್ಸಾಪ್ ಕರೆ ಮಾಡಿ ಮಾತನಾಡಿದ್ದ ಇಬ್ಬರು
> ಪರೀಕ್ಷೆಗೆ 15 ದಿನ ಇರುವಾಗ ಕೆಪಿಎಸ್‌ಸಿ ಕಚೇರಿಗೆ ಬಂದಿದ್ದ ಕನ್ನಾಳೆ
> ಗ್ಯಾನೇಂದ್ರ ಭೇಟಿ ಬಳಿಕ ಕನ್ನಾಳೆ ಭೇಟಿಯಾಗಿದ್ದ ಶಿವಶಂಕರಪ್ಪ
> ಬಸವರಾಜ್ ಕನ್ನಾಳೆ ಜೊತೆಗೆ ಸಂಪರ್ಕ ಇರೋದು ಸಾಬೀತು

ಶಿವಶಂಕರಪ್ಪ ಜೊತೆಗೆ ಕೆಪಿಎಸ್‌ಸಿ ಮತ್ತೊಬ್ಬ ಸದಸ್ಯೆ ಗೀತಾ ಅವರ ಮನೆ ಮೇಲೂ ಇ.ಡಿ ರೇಡ್ ಮಾಡಿದ್ದು, ದಾಖಲೆಗಳ ಪರಿಶೀಲನೆ ನಡೆಸಿದೆ. ಅಭ್ಯರ್ಥಿಗಳ ಜೊತೆ ನೇರ ಸಂಪರ್ಕ ಆರೋಪದಲ್ಲಿ ಗೀತಾಳನ್ನು ಇಡಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಗ್ಯಾನೇಂದ್ರ ಬಳಿ ಶಿವಶಂಕರಪ್ಪ ಪ್ರಶ್ನೆಪತ್ರಿಕೆ ಪಡೆದಿದ್ದ. ಅದನ್ನು ಗೀತಾ ಶಿವಶಂಕರಪ್ಪ ಬಳಿ ಕಲೆಕ್ಟ್ ಮಾಡಿದ್ರು. ಈ ಮೂಲಕ ಅಭ್ಯರ್ಥಿಗಳ ಜೊತೆ ಸಂಪರ್ಕ ಸಾಧಿಸಿದ್ರು. ಈ ಆರೋಪ ಸಾಬೀತು ಬೆನ್ನಲ್ಲೇ ಇಡಿ ಅಧಿಕಾರಿಗಳು ಡಾಲರ್ಸ್ ಕಾಲೋನಿಯ ಡಾಲರ್ಸ್ ಕಂಫರ್ಟ್ ಅಪಾರ್ಟ್ಮೆಂಟ್‌ನಲ್ಲಿದ್ದ ಗೀತಾ ಮನೆ ಮೇಲೆ ದಾಳಿ ಮಾಡಿ, ದಾಖಲೆಗಳನ್ನು ವಶಕ್ಕೆ ಪಡೆದ ಬಳಿಕ ಗೀತಾರನ್ನು ಅರೆಸ್ಟ್ ಮಾಡಿದ್ದಾರೆ. ಒಟ್ಟಾರೆ ಕೆಪಿಎಸ್‌ಸಿ ಹಗರಣದಲ್ಲಿ ಶಿವಶಂಕರಪ್ಪ ಮತ್ತು ಗೀತಾ ಅವರು ಇ.ಡಿ ಬಲೆ ಬಿದ್ದಿದ್ದಾರೆ. ಸದ್ಯ ಇಬ್ಬರನ್ನು ಕೋರ್ಟ್‌ಗೆ ಹಾಜರುಪಡಿಸಿ ಇಡಿ ಕಸ್ಟಡಿಗೆ ಕೇಳಿದ್ರು.

ಹಂಚಿಕೊಳ್ಳಿ: