ಮುಖ್ಯ ವಿಷಯಕ್ಕೆ ಹೋಗಿ
The Karnataka Today
8 Oct
ಸುದ್ದಿ
ಸುದ್ದಿ

ಕಂಠೀರವ ಸ್ಟುಡಿಯೋ ಜಂಕ್ಷನ್ ಬಳಿ ಕುಸಿದ ರಸ್ತೆ; ‘ಪಬ್ಲಿಕ್ ಟಿವಿ’ ವರದಿ ಈಗ ಫುಲ್‌ ವೈರಲ್!

– ವರದಿ ಬೆನ್ನಲ್ಲೇ ಡಾಂಬರು ಬದಲು ಮಣ್ಣು ಸುರಿದ GBA – ‘ಪಬ್ಲಿಕ್ ಟಿವಿ’ಯ ವಿಭಿನ್ನ ವರದಿಗೆ ಜನರ ಮೆಚ್ಚುಗೆ; ಅಧಿಕಾರಿಗಳಿಗೆ ಕ್ಲಾಸ್‌ ಬೆಂಗಳೂರು: ನಗರದಲ್ಲಿ ರಾತ್ರಿ ಸುರಿದ ಮಳೆಗೆ ರಸ್ತೆ ಕುಸಿದ ಆಗಿ ಕೊಚ್ಚಿ ಹೋಗಿದೆ...

· ಬೆಂಗಳೂರು ನಗರ
ಕಂಠೀರವ ಸ್ಟುಡಿಯೋ ಜಂಕ್ಷನ್ ಬಳಿ ರಸ್ತೆ ಕುಸಿತ; ‘ಪಬ್ಲಿಕ್ ಟಿವಿ’ ವರದಿ ಫುಲ್‌ ವೈರಲ್‌
ಹಂಚಿಕೊಳ್ಳಿ:

– ವರದಿ ಬೆನ್ನಲ್ಲೇ ಡಾಂಬರು ಬದಲು ಮಣ್ಣು ಸುರಿದ GBA
– ‘ಪಬ್ಲಿಕ್ ಟಿವಿ’ಯ ವಿಭಿನ್ನ ವರದಿಗೆ ಜನರ ಮೆಚ್ಚುಗೆ; ಅಧಿಕಾರಿಗಳಿಗೆ ಕ್ಲಾಸ್‌

ಬೆಂಗಳೂರು: ನಗರದಲ್ಲಿ ರಾತ್ರಿ ಸುರಿದ ಮಳೆಗೆ ರಸ್ತೆ ಕುಸಿದ ಆಗಿ ಕೊಚ್ಚಿ ಹೋಗಿದೆ. ಕಂಠೀರವ ಸ್ಟುಡಿಯೋದಿಂದ ಜಾಲಹಳ್ಳಿ ಕ್ರಾಸ್ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವಂತಹ ರಸ್ತೆಯಲ್ಲಿ ಘಟನೆ ನಡೆದಿದೆ.

ಮೋರಿ ನೀರೆಲ್ಲ ರಸ್ತೆ ಮೇಲೆ ಹರಿದ ಪರಿಣಾಮ ಕುಸಿತ ಆಗಿದ್ದು, ದೊಡ್ಡ ಅವಾಂತರ ಸೃಷ್ಟಿ ಆಗಿದೆ. ಸಾವಿರಾರು ವಾಹನಗಳು ಸಂಚರಿಸುವ ರಸ್ತೆಯ ದುಸ್ತಿತಿ ಬಗ್ಗೆ ‘ಪಬ್ಲಿಕ್‌ ಟಿವಿ’ ಬೆಳಕು ಚೆಲ್ಲಿದೆ.

ಪಬ್ಲಿಕ್ ಟಿವಿ ವರದಿಯ ತುಣುಕು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಬೇರೆ ಮಾಧ್ಯಮದಲ್ಲಿಯೂ ಪಬ್ಲಿಕ್ ಟಿವಿ ಗುಂಡಿಯ ದೃಶ್ಯವೂ ಪ್ರಸಾರವಾಗಿದೆ.
ಜಿಬಿಎ ಗಮನ ಸೆಳೆಯಲು ವಿಭಿನ್ನ ವರದಿಗಾರಿಕೆಯ ಮೂಲಕ ಬೆಂಗಳೂರಿನ ಸಮಸ್ಯೆಗಳಿಗೆ ‘ಪಬ್ಲಿಕ್‌ ಟಿವಿ’ ಧ್ವನಿಯಾಗಿದೆ.

ಪಬ್ಲಿಕ್ ಟಿವಿ ವರದಿ ಬಳಿಕ ಡಾಂಬಾರು ಬದಲು ಮಣ್ಣು ಸುರಿದು ಕೈತೊಳೆದುಕೊಳ್ಳುವ ಕೆಲಸವನ್ನು ಜಿಬಿಎ ಅಧಿಕಾರಿಗಳು ಮಾಡಿದ್ದಾರೆ. ಜಿಬಿಎ ನಡೆಗೆ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹಂಚಿಕೊಳ್ಳಿ: