ಮುಖ್ಯ ವಿಷಯಕ್ಕೆ ಹೋಗಿ
The Karnataka Today
8 Oct
ಸುದ್ದಿ
ಸುದ್ದಿ

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ: ಕಾವೇರಿ ನೀರಾವರಿ ನಿಗಮದಿಂದ 2 ಕೋಟಿ ರೂ. ಬಿಡುಗಡೆ!

ಮಡಿಕೇರಿ: ನಾಡಿನ ಜೀವನದಿ ತಲಕಾವೇರಿಯಲ್ಲಿ (Talacauvery) ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ (Theerthodbhava) ಇನ್ನೇನು ಕೇವಲ 15 ದಿನಗಳಷ್ಟೇ ಬಾಕಿ ಉಳಿದಿದೆ. ಇದೀಗ ಭಾಗಮಂಡಲ-ತಲಕಾವೇರಿ ಕ್ಷೇತ್ರ ವ್ಯಾಪ್ತಿಯಲ್...

· ಕೊಡಗು
ಕಾವೇರಿ ತೀರ್ಥೋದ್ಭವ ಸನ್ನಿಹಿತ – ಕಾವೇರಿ ನೀರಾವರಿ ನಿಗಮದಿಂದ 2 ಕೋಟಿ ರೂ. ಬಿಡುಗಡೆ
ಹಂಚಿಕೊಳ್ಳಿ:

ಮಡಿಕೇರಿ: ರಾಜ್ಯದ ಜೀವನಾಡಿಯಾದ ತಲಕಾವೇರಿಯಲ್ಲಿ (Talacauvery) ಜರುಗಲಿರುವ ಪವಿತ್ರ ತೀರ್ಥೋದ್ಭವಕ್ಕೆ (Theerthodbhava) ಕೇವಲ 15 ದಿನಗಳು ಬಾಕಿ ಇವೆ. ಸದ್ಯ ಭಾಗಮಂಡಲ-ತಲಕಾವೇರಿ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಅವಶ್ಯಕ ಕಾರ್ಯಗಳಿಗಾಗಿ ಕಾವೇರಿ ನೀರಾವರಿ ನಿಗಮದ (CNNL) ವತಿಯಿಂದ 2 ಕೋಟಿ ರೂ. ಮೊತ್ತದ ಅನುದಾನವನ್ನು ಮಂಜೂರು ಮಾಡಲಾಗಿದೆ.

2 ಕೋಟಿ ರೂ. ಅನುದಾನವು ಜಿಲ್ಲಾಧಿಕಾರಿಗಳ ಖಾತೆಗೆ ಜಮೆಯಾಗಿದೆ ಎಂದು ಜಿಲ್ಲಾಧಿಕಾರಿ ಸೋಮಶೇಖರ್ ಅವರು ಸ್ಪಷ್ಟಪಡಿಸಿದ್ದಾರೆ. ತುಲಾ ಸಂಕ್ರಮಣ ಜಾತ್ರೋತ್ಸವದ ಪ್ರಯುಕ್ತ ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕಾವೇರಿ ನೀರಾವರಿ ನಿಗಮದ ಮೂಲಕ ಈ ಹಣವನ್ನು ಒದಗಿಸಲಾಗಿದೆ. ಕಳೆದ ಸಾಲಿನಲ್ಲಿಯೂ ನಿಗಮದಿಂದ 2 ಕೋಟಿ ರೂ. ಅನುದಾನ ಮಂಜೂರಾಗಿತ್ತು. ಇದಲ್ಲದೆ, ಜಾತ್ರೋತ್ಸವದ ಸಿದ್ಧತೆ ಹಾಗೂ ಇತರ ಕೆಲಸಗಳಿಗಾಗಿ ಸರ್ಕಾರದಿಂದ ಪ್ರತ್ಯೇಕವಾಗಿ 75 ಲಕ್ಷ ರೂ. ಅನುದಾನವನ್ನು ನೀಡಲಾಗುತ್ತಿದೆ. ಇದನ್ನೂ ಓದಿ: 180 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್‌ ಸ್ಮಿತ್‌ಗೆ 1 ಕೋಟಿ ರೂ. ಘೋಷಣೆ

ಈ ಬಾರಿ ಕೂಡ 75 ಲಕ್ಷ ರೂ. ಅನುದಾನ ಬಿಡುಗಡೆಯಾಗಲಿದೆ ಎಂದು ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ತಿಳಿಸಿದ್ದಾರೆ. ತಲಕಾವೇರಿ ತೀರ್ಥೋದ್ಭವದ ಕಾರ್ಯಗಳು ಈಗಾಗಲೇ ಆರಂಭಗೊಂಡಿವೆ. ಸೆಪ್ಟೆಂಬರ್ 17 ರಂದು ಪತ್ತಾಯಕ್ಕೆ ಅಕ್ಕಿ ಹಾಕುವ ಮೂಲಕ ತುಲಾ ಸಂಕ್ರಮಣದ ಧಾರ್ಮಿಕ ವಿಧಿಗಳಿಗೆ ಚಾಲನೆ ನೀಡಲಾಗಿದೆ. ಅ.5ರಂದು ಬೆಳಗ್ಗೆ 10:30ಕ್ಕೆ ಆಜ್ಞಾ ಮುಹೂರ್ತ, ಅ.15ರಂದು ಅಕ್ಷಯ ಪಾತ್ರ ಹಾಗೂ ಕಾಣಿಕೆ ಡಬ್ಬಿಗಳನ್ನು ಇಡುವ ಕಾರ್ಯದೊಂದಿಗೆ, ಈ ಬಾರಿ ಅ.17 ರಂದು ರಾತ್ರಿ 7:50ಕ್ಕೆ ಸಲ್ಲುವ ಮೇಷಲಗ್ನದಲ್ಲಿ ಕಾವೇರಿ ತುಲಾಸಂಕ್ರಮಣ ಪವಿತ್ರ ತೀರ್ಥೋದ್ಭವ ನೆರವೇರಲಿದೆ. ಇದನ್ನೂ ಓದಿ: ರಾಮ ಮಂದಿರದಲ್ಲಿ `ಮಿಲಿಟರಿ ಮಾದರಿ’ ಶಿಸ್ತು – ಆಡಳಿತದಲ್ಲಿ ಮಹತ್ವದ ಬದಲಾವಣೆ

ಪ್ರಸ್ತುತ ಭಾಗಮಂಡಲ-ತಲಕಾವೇರಿ ವ್ಯಾಪ್ತಿಯಲ್ಲಿ ದೇವಾಲಯದ ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿಯುವ ಹಾಗೂ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಮುಂಬರುವ ದಿನಗಳಲ್ಲಿ ತ್ರಿವೇಣಿ ಸಂಗಮದಲ್ಲಿ ಹೂಳು ತೆಗೆಯುವಿಕೆ ಸೇರಿದಂತೆ ಇತರೆ ಕೆಲಸಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದೆ. ಇದನ್ನೂ ಓದಿ: ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿ ಹಾಕಿ ದಿಗ್ಗಜ ಪರ್ಗತ್ ಸಿಂಗ್ ನೇಮಕ

ಹಂಚಿಕೊಳ್ಳಿ: