ಮುಖ್ಯ ವಿಷಯಕ್ಕೆ ಹೋಗಿ
The Karnataka Today
7 Oct
Latest
ಸುದ್ದಿ

ಹೆಬ್ರಿ : 72ನೇ ವನ್ಯಜೀವಿ ಸಪ್ತಾಹ ಸಂಭ್ರಮ!

ಸೋಮೇಶ್ವರ ವನ್ಯಜೀವಿ ವಲಯ ಆಯೋಜಿಸಿದಪಕ್ಷಿ ವೀಕ್ಷಣೆ ಕಾರ್ಯಕ್ರಮ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಸ್ವಯಂಸೇವಕರಿಂದ ಪಕ್ಷಿವೀಕ್ಷಣೆ. ಹೆಬ್ರಿ : 72ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಸೋಮೇಶ್ವರ ವನ್ಯಜೀವಿ ವಲ...

· ಉಡುಪಿ
ಹೆಬ್ರಿ : 72ನೇ ವನ್ಯಜೀವಿ ಸಪ್ತಾಹ.
ಹಂಚಿಕೊಳ್ಳಿ:

ಸೋಮೇಶ್ವರ ವನ್ಯಜೀವಿ ವಲಯ ನಡೆಸಿಕೊಟ್ಟ ಪಕ್ಷಿ ವೀಕ್ಷಣೆ ಕಾರ್ಯಕ್ರಮ.

ಹೆಬ್ರಿ : 72ನೇ ವನ್ಯಜೀವಿ ಸಪ್ತಾಹದ ಪ್ರಯುಕ್ತ ಸೋಮೇಶ್ವರ ವನ್ಯಜೀವಿ ವಲಯ ಹಮ್ಮಿಕೊಂಡಿದ್ದ ಪಕ್ಷಿ ವೀಕ್ಷಣೆ ಕಾರ್ಯಕ್ರಮದಲ್ಲಿ ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎನ್ಎಸ್ಎಸ್ ಸ್ವಯಂಸೇವಕರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಆಯೋಜಿಸಿದ್ದ ಸೋಮೇಶ್ವರ ವನ್ಯಜೀವಿ ವಲಯದ ಅರಣ್ಯ ಅಧಿಕಾರಿ ಮಂಜುನಾಥ ಗಾಣಿಗ ಅವರು ಅರಣ್ಯ ಸಂರಕ್ಷಣೆ ಮತ್ತು ಅಭಿವೃದ್ಧಿಯಲ್ಲಿ ಪಕ್ಷಿಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪಕ್ಷಿ ತಜ್ಞ ಜಾಯ್ ಅವರು ಪಕ್ಷಿಗಳನ್ನು ಗುರುತಿಸುವ ಬಗೆ ಹಾಗೂ ಸೋಮೇಶ್ವರ ಅರಣ್ಯ ಪ್ರದೇಶದಲ್ಲಿ ಮಾತ್ರ ಕಂಡುಬರುವ ವಿಶಿಷ್ಟ ಪಕ್ಷಿಗಳ ಬಗ್ಗೆ ವಿವರಿಸಿ, ಅವುಗಳನ್ನು ವೀಕ್ಷಿಸುವ ಕ್ರಮಗಳ ಕುರಿತು ತಿಳಿಸಿಕೊಟ್ಟರು.

ಕಾಲೇಜಿನ ಪ್ರಾಂಶುಪಾಲ ಡಾ. ವಿದ್ಯಾಧರ ಹೆಗ್ಡೆ ಎಸ್ ಅವರು ಈ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಸುಷ್ಮಾ ರಾವ್, ಕಾಲೇಜಿನ ಎನ್ಎಸ್ಎಸ್ ಯೋಜನಾಧಿಕಾರಿ ಪ್ರವೀಣ ಶೆಟ್ಟಿ ಹಾಗೂ ಎನ್ಎಸ್ಎಸ್ ಸ್ವಯಂಸೇವಕರು ದುರ್ಬಿನುಗಳ ಸಹಾಯದಿಂದ ಪಕ್ಷಿಗಳನ್ನು ವೀಕ್ಷಿಸಿದರು.

ಹಂಚಿಕೊಳ್ಳಿ: