2 ಚಿರತೆ, 1 ಸಿಂಹವನ್ನು ದತ್ತು ಪಡೆದ ಸತೀಶ್ ಜಾರಕಿಹೊಳಿ ಅವರ ಪುತ್ರ!
ಬೆಳಗಾವಿ: ತಮ್ಮ ಜನ್ಮದಿನದ ಹಿನ್ನೆಲೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಪುತ್ರ ರಾಹುಲ್ ಅವರು ಎರಡು ಚಿರತೆ, ಒಂದು ಸಿಂಹವನ್ನು ದತ್ತು ಪಡೆದಿದ್ದಾರೆ. 27ರ ರಾಹುಲ್ ಜಾರಕಿಹೊಳಿ (Rahul Jarkiholi), ವ...


ಬೆಳಗಾವಿ: ತಮ್ಮ ಜನ್ಮದಿನದ ಹಿನ್ನೆಲೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಪುತ್ರ ರಾಹುಲ್ ಅವರು ಎರಡು ಚಿರತೆ, ಒಂದು ಸಿಂಹವನ್ನು ದತ್ತು ಪಡೆದಿದ್ದಾರೆ.
27ರ ರಾಹುಲ್ ಜಾರಕಿಹೊಳಿ (Rahul Jarkiholi), ವನ್ಯಜೀವಿಗಳ ಆರೈಕೆಗೆ ಮುಂದಾಗಿದ್ದಾರೆ. ಅರ್ಥಪೂರ್ಣ ಬರ್ತ್‌ಡೇ ಆಚರಿಸಿಕೊಳ್ಳಲು ಚಿರತೆ ಮತ್ತು ಸಿಂಹ ದತ್ತು ತೆಗೆದುಕೊಂಡಿದ್ದಾರೆ.
ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಕಿರು ಮೃಗಾಲಯದಲ್ಲಿರುವ ಸಿಂಹ, ಚಿರತೆಗೆ ಸಚಿವರ ಪುತ್ರ ಆಸರೆಯಾಗಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ರಾಹುಲ್ ವಿಭಿನ್ನವಾಗಿ ಬರ್ತ್‌ಡೇ ಆಚರಣೆ ಮಾಡಿಕೊಂಡಿದ್ದಾರೆ.




