ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯ ಡಿಜಿಎಂ ಆತ್ಮಹತ್ಯೆಗೆ ಶರಣು!
ಶಿವಮೊಗ್ಗ: ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿಐಎಸ್‌ಎಲ್ ಕಾರ್ಖಾನೆಯ (VISL Factory) ಡಿಜಿಎಂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭದ್ರಾವತಿ ನಗರದ ವಿಐಎಸ್ಎಲ್ ಅಧಿಕಾರಿಗಳ ಕ್ವಾಟ್ರಸ್‌ನಲ್ಲಿ ನಡೆದಿದೆ....


ಶಿವಮೊಗ್ಗ: ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿಐಎಸ್‌ಎಲ್ ಕಾರ್ಖಾನೆಯ (VISL Factory) ಡಿಜಿಎಂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭದ್ರಾವತಿ ನಗರದ ವಿಐಎಸ್ಎಲ್ ಅಧಿಕಾರಿಗಳ ಕ್ವಾಟ್ರಸ್‌ನಲ್ಲಿ ನಡೆದಿದೆ.
ವಿಐಎಸ್ಎಲ್‌ನ ಎಲೆಕ್ಟ್ರಿಕ್ ಡಿಪಾರ್ಟ್ಮೆಂಟ್‌ನಲ್ಲಿ ಡೆಪ್ಯೂಟಿ ಜನರಲ್ ಮ್ಯಾನೇಜರ್ ಆಗಿದ್ದ ಗೋವಿಂದರಾಜ್ (51) ನೇಣಿಗೆ ಶರಣಾದ ವ್ಯಕ್ತಿ. ತಮಿಳುನಾಡಿನ ಸೇಲಂ ಮೂಲದ ಗೋವಿಂದರಾಜ್ ಕಳೆದ 13 ವರ್ಷದಿಂದ ವಿಐಎಸ್‌ಎಲ್ ಕೆಲಸ ಮಾಡುತ್ತಿದ್ದರು. ಭಾನುವಾರವಷ್ಟೇ ಪತ್ನಿ, ಮಕ್ಕಳನ್ನು ಸೇಲಂಗೆ ಕಳುಹಿಸಿ ಭದ್ರಾವತಿ ನಗರದ ಸೇಂಟ್ ಚಾರ್ಲ್ಸ್ ಶಾಲೆಯ ಎದುರಿರುವ ಕ್ವಾಟ್ರಸ್‌ಗೆ ಬಂದಿದ್ದ ಗೋವಿಂದರಾಜ್ ರಾತ್ರಿ ಮನೆಯಲ್ಲಿ ಒಬ್ಬರೇ ಇದ್ದ ವೇಳೆ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಸೋಮವಾರ ಬೆಳಗ್ಗೆ ಗೋವಿಂದರಾಜ್ ಆಪ್ತ ಸಹಾಯಕ ಕರೆ ಮಾಡಿದ್ದಾರೆ. ಅನೇಕ ಬಾರಿ ಕರೆ ಮಾಡಿದರೂ ಕರೆಯನ್ನು ಸ್ವೀಕರಿಸದ ಕಾರಣ ಆತ ಕ್ವಾಟ್ರಸ್‌ಗೆ ತೆರಳಿ ಪರಿಶೀಲಿಸಿದ್ದಾರೆ. ಈ ವೇಳೆ ಡಿಜಿಎಂ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ.
ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಡಿಜಿಎಂ ಗೋವಿಂದರಾಜ್ ಸಾವಿನ ವಿಚಾರ ತಿಳಿಯುತ್ತಿದ್ದಂತೆ ಸೇಲಂನಲ್ಲಿದ್ದ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಸೇಲಂ ಆಗಮಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.




