ಮುಖ್ಯ ವಿಷಯಕ್ಕೆ ಹೋಗಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಸುದ್ದಿ

ಬೆಂಗಳೂರಿನ ದೀಪಾಂಜಲಿ ನಗರದಲ್ಲಿ ಲಾರಿ ಡಿಕ್ಕಿ: ಇಬ್ಬರು ಯುವತಿಯರ ದಾರುಣ ಸಾವು

ಬೆಂಗಳೂರು: ಮದುವೆಗೆ ಆಮಂತ್ರಣ (Wedding Invitation) ಪತ್ರ ನೀಡಲು ತೆರಳುತ್ತಿದ್ದಾಗ ಸ್ಕೂಟಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು-ಮೈಸೂರು ರ‍ಸ್ತೆಯ ದೀಪಾಂಜ...

· ಬೆಂಗಳೂರು ನಗರ
ಮದುವೆಗೆ ಆಮಂತ್ರಣ ನೀಡಲು ತೆರಳುತ್ತಿದ್ದಾಗ ಸ್ಕೂಟಿಗೆ ಲಾರಿ ಡಿಕ್ಕಿ – ಇಬ್ಬರು ಯುವತಿಯರು ದುರ್ಮರಣ
ಹಂಚಿಕೊಳ್ಳಿ:

ಬೆಂಗಳೂರು-ಮೈಸೂರು ರಸ್ತೆಯ ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಿಂದುಶ್ರೀ ಮತ್ತು ವಿದ್ಯಾ ಎಂಬ ಇಬ್ಬರು ಯುವತಿಯರು ಮೃತಪಟ್ಟಿದ್ದಾರೆ. ಮದುವೆ ಆಮಂತ್ರಣ ಪತ್ರಿಕೆಗಳನ್ನು ನೀಡಲು ಕತ್ರಿಗುಪ್ಪೆಗೆ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದ ನಂತರ ಚಾಲಕ ವಾಹನವನ್ನು ಬಿಟ್ಟು ಪರಾರಿಯಾಗಿದ್ದು, ಬ್ಯಾಟರಾಯನಪುರ ಸಂಚಾರ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಸೋಮವಾರ ಮದುವೆ ನಿಶ್ಚಯವಾಗಿದ್ದ ಸಿಂದುಶ್ರೀ ಅವರ ಸಾವಿನಿಂದ ಕುಟುಂಬಸ್ಥರು ಶೋಕಸಾಗರದಲ್ಲಿ ಮುಳುಗಿದ್ದಾರೆ. ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಆರೋಪಿ ಚಾಲಕನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಹಂಚಿಕೊಳ್ಳಿ: