ಬಾಯ್‌ಫ್ರೆಂಡ್ ಜೊತೆ ಸೇರಿ ಮಗಳಿಂದಲೇ ತಂದೆಯ ಹತ್ಯೆ ಆರೋಪ – 2 ತಿಂಗಳ ಬಳಿಕ ಶವ ಹೊರತೆಗೆದು ತನಿಖೆ
ಮಂಗಳೂರು: ಬಾಯ್‌ಫ್ರೆಂಡ್ ಜೊತೆ ಸೇರಿ ಮಗಳೇ ತಂದೆಯನ್ನು (Father) ಹತ್ಯೆ ಮಾಡಿರುವ ಆರೋಪ ಮಂಗಳೂರಲ್ಲಿ (Mangaluru) ಕೇಳಿ ಬಂದಿದೆ. ಈ ಹಿನ್ನೆಲೆ ಶವವನ್ನು ಹೊರತೆಗೆದು ತನಿಖೆ ನಡೆಸಲು ಪೊಲೀಸರು (Police) ಮುಂದಾಗಿದ್...


ಮಂಗಳೂರು: ಬಾಯ್‌ಫ್ರೆಂಡ್ ಜೊತೆ ಸೇರಿ ಮಗಳೇ ತಂದೆಯನ್ನು (Father) ಹತ್ಯೆ ಮಾಡಿರುವ ಆರೋಪ ಮಂಗಳೂರಲ್ಲಿ (Mangaluru) ಕೇಳಿ ಬಂದಿದೆ. ಈ ಹಿನ್ನೆಲೆ ಶವವನ್ನು ಹೊರತೆಗೆದು ತನಿಖೆ ನಡೆಸಲು ಪೊಲೀಸರು (Police) ಮುಂದಾಗಿದ್ದಾರೆ.
ನಗರದ ಕೊಟ್ಟಾರ ಫಸ್ಟ್ ಕ್ರಾಸ್ ನಿವಾಸಿ ಆಲ್ಬರ್ಟ್ ರೇಗೋ ಜುಲೈ 19 ರಂದು ಸಾವನ್ನಪ್ಪಿದ್ದರು. ಬಳಿಕ ಅವರ ಮಗಳು ಮಾಯಾ, ಸಂಬಂಧಿಕರಿಗೆ, ಸ್ಥಳೀಯರಿಗೆ ಮಾಹಿತಿ ನೀಡದೇ ಶವವನ್ನು ದೇರೆಬೈಲ್ ಚರ್ಚ್‌ನಲ್ಲಿ ದಫನ್ ಮಾಡಿದ್ದರು. ಇದರಿಂದ ಮಗಳ ಮೇಲೆ ಸಂಶಯಗೊಂಡು ರೇಗೋ ಸ್ನೇಹಿತರು ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಮಾಯಾ ವಿರುದ್ಧ ಪ್ರಕರಣ ದಾಖಲಾಗಿದೆ.
ರೇಗೋ ಸಾವಿಗೂ ಮುನ್ನ ತಂದೆಯಿಂದ ಒತ್ತಾಯಪೂರ್ವಕವಾಗಿ ವಿಲ್ ಬರೆಸಿಕೊಂಡಿದ್ದಾರೆ. ಬಳಿಕ ಬಾಯ್ ಫ್ರೆಂಡ್ ಜೊತೆ ಸೇರಿ ತಂದೆಯನ್ನೇ ಕೊಲೆ ಮಾಡಲಾಗಿದೆ. ನಂತರ ಪೊಲೀಸರ ಜೊತೆ ಸೇರಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂಬ ಆರೋಪ ಸಹ ಕೇಳಿಬಂದಿದೆ.
ರೇಗೋ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅವರು ಮಕ್ಕಳಿಗಾಗಿ ಸಾಕಷ್ಟು ಆಸ್ತಿ ಮಾಡಿದ್ದರು. ದುಬೈನಲ್ಲಿ ಇಬ್ಬರು ಮಕ್ಕಳು ವಾಸವಾಗಿದ್ದರು. ಅವರು ಮಗಳೊಂದಿಗೆ ಮಂಗಳೂರಿನಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.




