ನೋಯ್ಡಾದ ಡಾ. ಸುನಿಲ್ ಕುಮಾರ್ ಮಂಡಲ್ ತಿಳಿಸಿದ ಹೃದಯದ ಆರೋಗ್ಯ ಹಾಳುಮಾಡುವ 5 ಅಭ್ಯಾಸಗಳು
ನಮ್ಮ ದೇಹದ ಇಂಜಿನ್ ಅಂದ್ರೆ ಅದು ಹೃದಯ. ಈ ಹೃದಯವನ್ನು ಸೇಫ್ ಆಗಿ ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯ. ಇಂದು ಪ್ರಪಂಚದಾದ್ಯಂತ ಅತಿ ಹೆಚ್ಚು ಜನ ಸಾಯುತ್ತಿರುವುದಕ್ಕೆ ಇದೇ ಹೃದಯ ಸಂಬಂಧಿ ಕಾಯಿಲೆಗಳು ಮುಖ್ಯ ಕಾರಣವಾಗಿವೆ...

ನೋಯ್ಡಾದ ಕೈಲಾಶ್ ಆಸ್ಪತ್ರೆಯ ಹಿರಿಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ಸುನಿಲ್ ಕುಮಾರ್ ಮಂಡಲ್ ಅವರು ಹೃದಯದ ಆರೋಗ್ಯಕ್ಕೆ ಹಾನಿಕಾರಕವಾದ ಐದು ಪ್ರಮುಖ ಜೀವನಶೈಲಿಗಳ ಬಗ್ಗೆ ಎಚ್ಚರಿಸಿದ್ದಾರೆ. ಏಳು ಗಂಟೆಗಿಂತ ಕಡಿಮೆ ನಿದ್ದೆ ಮಾಡುವುದು, ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು ಮತ್ತು ಅತಿಯಾದ ಒತ್ತಡವು ಹೃದಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅಲ್ಲದೆ, ಅತಿಯಾದ ವ್ಯಾಯಾಮ, ಸಂಸ್ಕರಿಸಿದ ಆಹಾರ ಪದಾರ್ಥಗಳ ಸೇವನೆ ಮತ್ತು ಹಣ್ಣಿನ ಜ್ಯೂಸ್ ಕುಡಿಯುವ ಅಭ್ಯಾಸಗಳು ಹೃದಯ ಸಂಬಂಧಿ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ. ಇಂತಹ ಅನಾರೋಗ್ಯಕರ ಕ್ರಮಗಳಿಂದ ದೂರವಿದ್ದು ಹೃದಯವನ್ನು ರಕ್ಷಿಸಿಕೊಳ್ಳುವುದು ಅತ್ಯಗತ್ಯ.




