ಮುಖ್ಯ ವಿಷಯಕ್ಕೆ ಹೋಗಿ
The Karnataka Today
13 Oct
ಸುದ್ದಿ
ಜೀವನಶೈಲಿ

ನಿದ್ದೆ ಬರ್ತಿಲ್ಲವೇ?: ಸುಖ ನಿದ್ದೆಗೆ ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿ ಈ 6 ಪದಾರ್ಥಗಳನ್ನು!

ರಾತ್ರಿ ಹೊತ್ತು ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಹಾಗಾದರೆ ನಿಮ್ಮ ದೈನಂದಿನ ಡಯಟ್‌ನಲ್ಲಿ ಈ 6 ಆಹಾರಗಳನ್ನು ಸೇರಿಸಿಕೊಳ್ಳಿ. ಇವು ನಿಮ್ಮ ನಿದ್ದೆಯ ಗುಣಮಟ್ಟವನ್ನು ಹೆಚ್ಚಿಸುತ್ತವೆ. ಈ ಸ್ಟೋರಿ ನೋಡಿ..

'ನಿದ್ದೆ ಬರ್ತಿಲ್ಲ ನಂಗೆ ನಿದ್ದೆ ಬರ್ತಿಲ್ಲ'.. ರಾತ್ರಿಯೆಲ್ಲಾ ಹೀಗ್ ಹಾಡೋ ಪಾಡು ನಿಮ್ಮದಾ? ಹಾಗಿದ್ರೆ ಹೀಗ್ ಮಾಡಿ!
ಹಂಚಿಕೊಳ್ಳಿ:

ರಾತ್ರಿಯ ವೇಳೆ ನಿದ್ದೆಯ ಸಮಸ್ಯೆ ಕಾಡುತ್ತಿದೆಯೇ? ಹಾಗಿದ್ದರೆ ನಿಮ್ಮ ನಿತ್ಯದ ಆಹಾರ ಕ್ರಮದಲ್ಲಿ ಈ 6 ಆಹಾರ ಪದಾರ್ಥಗಳನ್ನು ಸೇರಿಸಿ. ಇವು ನಿಮ್ಮ ನಿದ್ದೆಯ ಗುಣಮಟ್ಟವನ್ನು ಉತ್ತಮಗೊಳಿಸುತ್ತವೆ. ಈ ಸ್ಟೋರಿ ನೋಡಿ..

ರಾತ್ರಿಯ ವೇಳೆ ನಿದ್ದೆಯ ಸಮಸ್ಯೆ ಕಾಡುತ್ತಿದೆಯೇ? ಹಾಗಿದ್ದರೆ ನಿಮ್ಮ ನಿತ್ಯದ ಆಹಾರ ಕ್ರಮದಲ್ಲಿ ಈ 6 ಆಹಾರ ಪದಾರ್ಥಗಳನ್ನು ಸೇರಿಸಿ. ಇವು ನಿಮ್ಮ ನಿದ್ದೆಯ ಗುಣಮಟ್ಟವನ್ನು ಉತ್ತಮಗೊಳಿಸುತ್ತವೆ.

ಕುಂಬಳಕಾಯಿ ಬೀಜಗಳಲ್ಲಿ ಟ್ರಿಪ್ಟೊಫಾನ್ ಎಂಬ ಅಮೈನೋ ಆಸಿಡ್ ಅಂಶವಿದೆ. ಇವುಗಳನ್ನು ಕ್ರಮಬದ್ಧವಾಗಿ ಸೇವಿಸುವುದರಿಂದ ರಾತ್ರಿಯಲ್ಲಿ ಸುಖ ನಿದ್ದೆ ನಿಮ್ಮದಾಗಲಿದೆ.

ಮಲಗುವ ಮೊದಲು ಒಂದು ಲೋಟ ಬಿಸಿ ಹಾಲು ಸೇವಿಸುವುದರಿಂದ ಆತಂಕ ತಗ್ಗುತ್ತದೆ. ಇದು ಸ್ನಾಯುಗಳನ್ನು ಸಡಿಲಗೊಳಿಸಿ, ಆರಾಮವಾಗಿ ನಿದ್ದೆ ಮಾಡಲು ಸಹಕಾರಿಯಾಗಿದೆ.

ಸಾಲ್ಮನ್ ಮತ್ತು ಟ್ಯೂನಾದಂತಹ ಮೀನುಗಳಲ್ಲಿ ಒಮೆಗಾ-3 ಫ್ಯಾಟಿ ಆಸಿಡ್ ಹಾಗೂ ವಿಟಮಿನ್ ಡಿ ಸಮೃದ್ಧವಾಗಿದೆ. ಇದು ಸೆರೊಟೋನಿನ್ ಮಟ್ಟವನ್ನು ವೃದ್ಧಿಸಿ, ಸುಖ ನಿದ್ದೆಗೆ ನೆರವಾಗುತ್ತದೆ.

ಸೆರೊಟೋನಿನ್ ಮತ್ತು ಆಂಟಿಆಕ್ಸಿಡೆಂಟ್‌ಗಳು ಕಿವಿ ಹಣ್ಣಿನಲ್ಲಿ ಹೇರಳವಾಗಿವೆ. ಮಲಗುವ ಮುನ್ನ ಇದನ್ನು ಸೇವಿಸಿದರೆ ಬೇಗನೆ ನಿದ್ದೆ ಬರುತ್ತದೆ ಮತ್ತು ಹೆಚ್ಚು ಹೊತ್ತು ನೆಮ್ಮದಿಯಾಗಿ ನಿದ್ದೆ ಮಾಡಬಹುದು.

ಆಂಟಿಆಕ್ಸಿಡೆಂಟ್‌ಗಳು, ಫೈಬರ್ ಮತ್ತು ಪೊಟ್ಯಾಸಿಯಮ್‌ನಿಂದ ಸಮೃದ್ಧವಾಗಿರುವ ಚೆರ್ರಿ ಹಣ್ಣುಗಳು ದೇಹದ ಉರಿಯೂತವನ್ನು ತಗ್ಗಿಸುತ್ತವೆ. ಜೊತೆಗೆ ನಿದ್ದೆಯ ಗುಣಮಟ್ಟವನ್ನು ಹೆಚ್ಚಿಸುತ್ತವೆ.

ಬಾದಾಮಿ, ವಾಲ್‌ನಟ್ಸ್ ಮತ್ತು ಪಿಸ್ತಾದಂತಹ ನಟ್ಸ್‌ಗಳಲ್ಲಿ ಮೆಲಟೋನಿನ್, ಮೆಗ್ನೀಸಿಯಮ್ ಮತ್ತು ಸತು (ಜಿಂಕ್) ಅಧಿಕವಾಗಿವೆ. ಇವುಗಳನ್ನು ಸೇವಿಸಿದರೆ ರಾತ್ರಿ ಬೇಗನೆ ನಿದ್ದೆ ಬರುತ್ತದೆ.

ಹಂಚಿಕೊಳ್ಳಿ: