ಮುಖ್ಯ ವಿಷಯಕ್ಕೆ ಹೋಗಿ
The Karnataka Today
8 Oct
ಸುದ್ದಿ
ಜೀವನಶೈಲಿ

ನಾವೆಲ್ಲಾ ದಿನನಿತ್ಯ ಬಳಸುವ ಈ ವಸ್ತುಗಳಿಂದ ಕ್ಯಾನ್ಸರ್ ಬರುವ ಅಪಾಯವಿದೆಯೇ? ಆದಷ್ಟೂ ಬೇಗ ತಿಳಿದುಕೊಳ್ಳಿ!

ಕ್ಯಾನ್ಸರ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವುದು ನಿಜಕ್ಕೂ ಆತಂಕದ ವಿಚಾರ. ಕ್ಯಾನ್ಸರ್ ಅನ್ನೋದು ರಾತ್ರೋರಾತ್ರಿ ಬರುವ ಕಾಯಿಲೆಯಲ್ಲ ಅನ್ನೋದನ್ನ ನಾವು ಮೊದಲು ಅರ್ಥಮಾಡಿಕೊಳ್ಳಬೇಕು.

ನಾವೆಲ್ಲಾ ದಿನನಿತ್ಯ ಬಳಸುವ ಈ ವಸ್ತುಗಳಿಂದ ಕ್ಯಾನ್ಸರ್ ಬರುವ ಅಪಾಯವಿದೆಯೇ? ಆದಷ್ಟೂ ಬೇಗ ತಿಳಿದುಕೊಳ್ಳಿ!
ಹಂಚಿಕೊಳ್ಳಿ:

ಕ್ಯಾನ್ಸರ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವುದು ನಿಜಕ್ಕೂ ಆತಂಕದ ವಿಚಾರ. ಕ್ಯಾನ್ಸರ್ ಅನ್ನೋದು ರಾತ್ರೋರಾತ್ರಿ ಬರುವ ಕಾಯಿಲೆಯಲ್ಲ ಅನ್ನೋದನ್ನ ನಾವು ಮೊದಲು ಅರ್ಥಮಾಡಿಕೊಳ್ಳಬೇಕು.

ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕದ ವಿಚಾರ. ಕ್ಯಾನ್ಸರ್ ರಾತ್ರೋರಾತ್ರಿ ಬರುವ ಕಾಯಿಲೆಯಲ್ಲ. ಹಾನಿಕಾರಕ ರಾಸಾಯನಿಕಗಳ ಸಂಪರ್ಕ, ಕೆಟ್ಟ ಜೀವನಶೈಲಿ, ಹಾರ್ಮೋನ್ ಏರುಪೇರು, ರೋಗನಿರೋಧಕ ಶಕ್ತಿ ಕುಂದುವುದು ಮತ್ತು ಚಿಕಿತ್ಸೆ ವಿಳಂಬ ಮಾಡುವುದರಿಂದ ಕ್ಯಾನ್ಸರ್ ಬರುತ್ತದೆ. ಬರೀ ಆಹಾರ ಮಾತ್ರವಲ್ಲ, ನಾವು ಮನೆಯಲ್ಲಿ ದಿನನಿತ್ಯ ಬಳಸುವ ಕೆಲವು ವಸ್ತುಗಳು ಕೂಡ ಕ್ಯಾನ್ಸರ್ ತರಿಸಬಹುದು. ಆ ವಸ್ತುಗಳು ಯಾವುವು ಅಂತ ಇಲ್ಲಿ ನೋಡೋಣ.

ನಾವು ದಿನನಿತ್ಯ ಬಳಸುವ ಮೇಕಪ್ ವಸ್ತುಗಳು ನೇರವಾಗಿ ಕ್ಯಾನ್ಸರ್ ತರಿಸುವುದಿಲ್ಲ. ಆದರೆ, ಕೆಲವು ಪ್ರಾಡಕ್ಟ್‌ಗಳಲ್ಲಿ ಸಣ್ಣ ಪ್ರಮಾಣದ ಅಪಾಯಕಾರಿ ರಾಸಾಯನಿಕಗಳು ಇರಬಹುದು. ಇವುಗಳನ್ನು ತಯಾರಿಸುವಾಗ ಸೀಸ (Lead), ಆರ್ಸೆನಿಕ್ ಮತ್ತು ಕ್ಯಾಡ್ಮಿಯಂನಂತಹ ಅಂಶಗಳು ಆಕಸ್ಮಿಕವಾಗಿ ಬಣ್ಣ ಮತ್ತು ಪೌಡರ್‌ಗಳಲ್ಲಿ ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ.

ಪ್ಲಾಸ್ಟಿಕ್ ಬಾಟಲಿಗಳನ್ನು ಬಿಸಿಲಿನಲ್ಲಿ ಇಡಬಾರದು ಮತ್ತು ಪದೇ ಪದೇ ಬಳಸಬಾರದು. ಅಪರೂಪಕ್ಕೆ ಬಳಸಿದರೆ ದೊಡ್ಡ ಹಾನಿಯಿಲ್ಲ. ಆದರೆ, ಬಿಸಿಯಾದ ಅಥವಾ ಒಮ್ಮೆ ಬಳಸಿದ ಪ್ಲಾಸ್ಟಿಕ್ ಬಾಟಲಿಗಳನ್ನು ಮತ್ತೆ ಮತ್ತೆ ನೀರು ಕುಡಿಯಲು ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.

ಕರಿಯಲು ಬಳಸಿದ ಎಣ್ಣೆಯನ್ನು ಮತ್ತೆ ಮತ್ತೆ ಬಿಸಿ ಮಾಡಿ ಬಳಸುವುದರಿಂದ ಆಲ್ಡಿಹೈಡ್ ಮತ್ತು ಆಕ್ಸಿಡೈಸ್ಡ್ ಫ್ಯಾಟ್‌ನಂತಹ ಹಾನಿಕಾರಕ ಅಂಶಗಳು ಉತ್ಪತ್ತಿಯಾಗುತ್ತವೆ. ಇವು ಕಾಲಕ್ರಮೇಣ ದೇಹದಲ್ಲಿ ಉರಿಯೂತ ಮತ್ತು ಆಕ್ಸಿಡೇಟಿವ್ ಸ್ಟ್ರೆಸ್ ಹೆಚ್ಚಿಸುತ್ತವೆ. ಹಾಗಾಗಿ, ಒಮ್ಮೆ ಬಳಸಿದ ಎಣ್ಣೆಯನ್ನು ಮತ್ತೆ ಅಡುಗೆಗೆ ಬಳಸುವುದನ್ನು ಬಿಟ್ಟುಬಿಡಿ.

ಹೋಟೆಲ್‌ಗಳಲ್ಲಿ ಆಹಾರವನ್ನು ಪ್ಯಾಕ್ ಮಾಡಲು ಅಲ್ಯೂಮಿನಿಯಂ ಫಾಯಿಲ್ ಬಳಸುತ್ತಾರೆ. ಅಪರೂಪಕ್ಕೆ ಬಳಸಿದರೆ ತೊಂದರೆಯಿಲ್ಲ. ಆದರೆ, ಹುಳಿ ಅಂಶ ಹೆಚ್ಚಿರುವ ಆಹಾರವನ್ನು ಪದೇ ಪದೇ ಇದರಲ್ಲಿ ಸುತ್ತಿಟ್ಟರೆ, ಅಲ್ಯೂಮಿನಿಯಂ ಅಂಶ ಆಹಾರ ಸೇರುವ ಅಪಾಯವಿರುತ್ತದೆ. ಇದು ನೇರವಾಗಿ ಕ್ಯಾನ್ಸರ್ ತರುತ್ತದೆ ಎಂದು ಸಾಬೀತಾಗಿಲ್ಲದಿದ್ದರೂ, ದೀರ್ಘಕಾಲದ ಬಳಕೆ ನಿಲ್ಲಿಸುವುದು ಸೇಫ್. ಇದರ ಬದಲು ಸ್ಟೀಲ್ ಪಾತ್ರೆಗಳನ್ನು ಬಳಸಿ.

ದೋಸೆ, ಚಪಾತಿ ಮಾಡಲು ಹೆಚ್ಚಿನ ಮನೆಗಳಲ್ಲಿ ನಾನ್-ಸ್ಟಿಕ್ ಪ್ಯಾನ್ ಬಳಸುತ್ತಾರೆ. ಇದು ಬಳಸಲು ಸುಲಭವಾದರೂ, ಅತಿಯಾಗಿ ಬಿಸಿ ಮಾಡಬಾರದು ಮತ್ತು ಕೋಟಿಂಗ್ ಹಾಳಾದ ಮೇಲೆ ಬಳಸಲೇಬಾರದು. ಅತಿ ಹೆಚ್ಚಿನ ಉಷ್ಣಾಂಶದಲ್ಲಿ ಬಿಸಿ ಮಾಡಿದಾಗ ಆರೋಗ್ಯಕ್ಕೆ ಹಾನಿ ಮಾಡುವ ಕಣಗಳು ಇದರಿಂದ ಬಿಡುಗಡೆಯಾಗುತ್ತವೆ. ಕೋಟಿಂಗ್ ಹಾಳಾದ ಪ್ಯಾನ್ ಬಿಸಾಡಿ ಹೊಸದು ಕೊಳ್ಳುವುದು ಒಳ್ಳೆಯದು.

ಆಹಾರವನ್ನು ಸ್ಟೋರ್ ಮಾಡಲು ನಾವು ಹೆಚ್ಚಾಗಿ ಪ್ಲಾಸ್ಟಿಕ್ ಡಬ್ಬಿಗಳನ್ನು ಬಳಸುತ್ತೇವೆ. ಆದರೆ, ಬಿಸಿ ಆಹಾರವನ್ನು ಇದರಲ್ಲಿ ಇಟ್ಟಾಗ ಅಥವಾ ಮೈಕ್ರೋವೇವ್‌ನಲ್ಲಿ ಬಿಸಿ ಮಾಡಿದಾಗ ಅಪಾಯ ಗ್ಯಾರಂಟಿ. ಹಳೆಯ ಅಥವಾ ಮೈಕ್ರೋವೇವ್‌ಗೆ ಒಗ್ಗದ ಡಬ್ಬಿಗಳನ್ನು ಬಳಸಿದರೆ ಬಿಸಿಗೆ BPA ಯಂತಹ ರಾಸಾಯನಿಕಗಳು ಮತ್ತು ಮೈಕ್ರೋಪ್ಲಾಸ್ಟಿಕ್ ಕಣಗಳು ಆಹಾರ ಸೇರಿಕೊಳ್ಳುತ್ತವೆ. ಈ ರಾಸಾಯನಿಕಗಳು ನಮ್ಮ ದೇಹದ ಹಾರ್ಮೋನ್ ಮತ್ತು ಜೀವಕೋಶಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.

ಹಂಚಿಕೊಳ್ಳಿ: