ವಿಜಯಪುರ: ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿಸಿದ ಪತ್ನಿ ಸೇರಿ ನಾಲ್ವರ ಬಂಧನ
ವಿಜಯಪುರ: ಪ್ರಿಯಕರನಿಗಾಗಿ ಗಂಡನ ಬಲಿ ಪಡೆದು ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದ ಅಪ್ರಾಪ್ತ ಸೇರಿ ನಾಲ್ವರನ್ನು ಅರೆಸ್ಟ್ ಮಾಡಿದ ಘಟನೆ ವಿಜಯಪುರದಲ್ಲಿ (Vijayapura) ನಡೆದಿದೆ. ಮೃತನನ್ನು 42 ವರ್ಷದ ರಾಜಶೇಖರ್ ಬಿರಾದ...

ವಿಜಯಪುರದ ಏಕತಾ ನಗರದ ನಿವಾಸಿ ರಾಜಶೇಖರ್ ಬಿರಾದಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಪತ್ನಿ ಅಶ್ವಿನಿ ಬಿರಾದಾರ್, ಪ್ರಿಯಕರ ಆನಂದ್ ಕಲ್ಲೂರ್, ಸಚಿನ್ ಬಡಳ್ಳಿ ಹಾಗೂ ಅಪ್ರಾಪ್ತ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್ 4ರಂದು ವಾಯುವಿಹಾರಕ್ಕೆ ತೆರಳಿದ್ದ ರಾಜಶೇಖರ್ ಅವರನ್ನು ಸ್ಕಾರ್ಪಿಯೋ ವಾಹನದಿಂದ ಡಿಕ್ಕಿ ಹೊಡೆಸಿ ಅಪಘಾತದಂತೆ ಬಿಂಬಿಸಲು ಆರೋಪಿಗಳು ಪ್ರಯತ್ನಿಸಿದ್ದರು. ವಿಚಾರಣೆ ವೇಳೆ ಪತ್ನಿ ಅಶ್ವಿನಿ ತನ್ನ ಪತಿಯನ್ನು ಕೊಲೆ ಮಾಡಲು ಪ್ರಿಯಕರನಿಗೆ ಸುಪಾರಿ ನೀಡಿದ್ದ ವಿಷಯ ಬೆಳಕಿಗೆ ಬಂದಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕೃತ್ಯದ ಸತ್ಯಾಂಶ ಬಯಲಾಗಿದ್ದು, ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.




