ಸಿಎಂ ವಿಜಯ್ ವಿಶಿಷ್ಟ ಕೈಸನ್ನೆಯನ್ನು ಆರ್ಎಸ್ಎಸ್ ಧ್ವಜವಂದನೆಗೆ ಹೋಲಿಸಿದ ಡಿಎಂಕೆ
ಚೆನ್ನೈ: ಜೋಸೆಫ್ ಸಿ ವಿಜಯ್ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಅವರ ಪ್ರತಿಯೊಂದು ನಡೆ ಬಗ್ಗೆಯೂ ವಿಪಕ್ಷಗಳು ಟೀಕೆಗಳ ಸುರಿಮಳೆಗೈಯುತ್ತಿವೆ.ವಿಜಯ್ ಅವರ ಪ್ರಸಿದ್ಧ ಕೈಸನ್ನೆಯನ್ನು ಆರೆಸ್ಸ...

ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ಸಿ ವಿಜಯ್ ಅವರ ಕೈಸನ್ನೆಯನ್ನು ಆರೆಸ್ಸೆಸ್ನ ಧ್ವಜವಂದನೆಗೆ ಹೋಲಿಸಿ ಡಿಎಂಕೆ ಪಕ್ಷವು ವ್ಯಂಗ್ಯಚಿತ್ರವೊಂದನ್ನು ಹಂಚಿಕೊಂಡಿದೆ. ಟಿವಿಕೆ ಪಕ್ಷವು ಆರೆಸ್ಸೆಸ್ನ ಬೆಂಬಲಿತ ಸಂಘಟನೆ ಎಂದು ಡಿಎಂಕೆ ಐಟಿ ವಿಭಾಗವು ಟೀಕಿಸಿದೆ. ಈ ಹಿಂದೆ ಎಂ.ಕೆ. ಸ್ಟಾಲಿನ್ ಅವರು ಸೀಟು ಹಂಚಿಕೆಯ ಸಂದರ್ಭದಲ್ಲಿ ಇದೇ ಬಗೆಯ ಸನ್ನೆಯನ್ನು ಬಳಸಿದ್ದರು. ಸದ್ಯ ವಿಜಯ್ ಮತ್ತು ಅವರ ಸಂಪುಟದ ಸದಸ್ಯರು ಈ ಸನ್ನೆಯನ್ನು ತಮ್ಮ ರಾಜಕೀಯ ಗುರುತಾಗಿ ಬಳಸುತ್ತಿದ್ದು, ಇದು ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದೆ.




