ಮುಖ್ಯ ವಿಷಯಕ್ಕೆ ಹೋಗಿ
The Karnataka Today
16 Oct
ಸುದ್ದಿ
ಕರ್ನಾಟಕ

ಬೆಂಗಳೂರು: ಬಿಎಂಟಿಸಿ ದರ ಶೇ. 40 ಹಾಗೂ ಕೆಎಸ್‌ಆರ್‌ಟಿಸಿ ದರ ಶೇ. 25 ಹೆಚ್ಚಳಕ್ಕೆ ಶಿಫಾರಸು

ಬೆಂಗಳೂರು: ಕರ್ನಾಟಕದಲ್ಲಿ ಸಾರ್ವಜನಿಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳುವ ಸಾಧ್ಯತೆ ದಟ್ಟವಾಗಿದೆ.! ಈಗಾಗಲೇ ನಂದಿನಿ ಹಾಲಿನ ದರ ಹೆಚ್ಚಳವಾಗುವುದು ಪಕ್ಕಾ ಆಗಿರುವ ಬೆನ್ನಲ್ಲೇ, ಇದೀಗ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ...

· ಬೆಂಗಳೂರು ನಗರ
ಬಸ್ ಪ್ರಯಾಣಿಕರ ಶೀಘ್ರ ಜೇಬಿಗೆ ಕತ್ತರಿ? BMTC ಶೇ. 40, KSRTC ಶೇ. 25ರಷ್ಟು ದರ ಹೆಚ್ಚಳಕ್ಕೆ ಸಮಿತಿ ಶಿಫಾರಸು!
ಹಂಚಿಕೊಳ್ಳಿ:

ರಾಜ್ಯದ ಸಾರಿಗೆ ನಿಗಮಗಳು ಎದುರಿಸುತ್ತಿರುವ ಆರ್ಥಿಕ ಸಂಕಷ್ಟವನ್ನು ನಿವಾರಿಸಲು ಬಸ್ ಪ್ರಯಾಣ ದರವನ್ನು ಏರಿಕೆ ಮಾಡುವಂತೆ ನಿವೃತ್ತ ಐಎಎಸ್ ಅಧಿಕಾರಿ ಅತುಲ್ ತಿವಾರಿ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ನಿಗಮಗಳ ಮೇಲೆ ಸುಮಾರು 6,600 ಕೋಟಿ ರೂಪಾಯಿಗೂ ಹೆಚ್ಚಿನ ಸಾಲದ ಹೊರೆ ಇದ್ದು, ಇಂಧನ ವೆಚ್ಚ ಮತ್ತು ಸಿಬ್ಬಂದಿ ವೇತನ ಹೆಚ್ಚಳದಿಂದಾಗಿ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ದರವನ್ನು ಶೇ. 40 ಹಾಗೂ ಕೆಎಸ್‌ಆರ್‌ಟಿಸಿ ಸೇರಿದಂತೆ ಇತರೆ ನಿಗಮಗಳ ದರವನ್ನು ಶೇ. 25 ರಷ್ಟು ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ನವೆಂಬರ್ ಮೊದಲ ವಾರದಲ್ಲಿ ಈ ಕುರಿತು ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ.

ಹಂಚಿಕೊಳ್ಳಿ: